Tuesday, March 18, 2025
Homeರಾಜಕೀಯಕಾಂಗ್ರೆಸ್ ನಾಮಪತ್ರ ತಿರಸ್ಕೃತ: ಗುಜರಾತ್ ನಲ್ಲಿ ಚುನಾವಣೆಗೂ ಮೊದಲೇ ಖಾತೆ ತರೆದ ಬಿಜೆಪಿ

ಕಾಂಗ್ರೆಸ್ ನಾಮಪತ್ರ ತಿರಸ್ಕೃತ: ಗುಜರಾತ್ ನಲ್ಲಿ ಚುನಾವಣೆಗೂ ಮೊದಲೇ ಖಾತೆ ತರೆದ ಬಿಜೆಪಿ

ಸೂರತ್: ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಒಂದು ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಮತದಾನ ನಡೆಯದೆಯೇ ಬಿಜೆಪಿ ಖಾತೆ ತೆರೆದಿದೆ. ಗುಜರಾತ್ ನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ. ಇನ್ನುಳಿದ ಏಳು ಮಂದಿ ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಅವಿರೋಧ ಆಯ್ಕೆಯಾಗಿದೆ. ಕ್ಷೇತ್ರದಲ್ಲಿ ಒಟ್ಟು ಹತ್ತು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಸ್ಪರ್ಧಿಸಬೇಕಾಗಿತ್ತು. ಆದರೆ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಹೀಗಾಗಿ ಬಿಜೆಪಿಯ ಮುಕೇಶ್ ದಲಾಲ್ ಚುನಾವಣೆಯೇ ಇಲ್ಲದೆ ಗೆದ್ದಂತಾಗಿದೆ. ಮೇ 7ರಂದು ಈ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿತ್ತು. ಏ. 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏ 22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆದಿನವಾಗಿತ್ತು. ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.

RELATED ARTICLES
- Advertisment -
Google search engine

Most Popular