Sunday, March 23, 2025
Homeರಾಜಕೀಯವಿಧಾನ ಪರಿಷತ್ ಎರಡು ಸೀಟುಗಳು ಕಾಂಗ್ರೆಸ್, ಜಯಗಳಿಸಲಿದೆ - ಮಿಥುನ್ ಎಂ. ರೈ

ವಿಧಾನ ಪರಿಷತ್ ಎರಡು ಸೀಟುಗಳು ಕಾಂಗ್ರೆಸ್, ಜಯಗಳಿಸಲಿದೆ – ಮಿಥುನ್ ಎಂ. ರೈ

ಮೂಲ್ಕಿ: ಜೂ.3 ರಂದು ನಡೆಯಲಿರುವ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಮೀಸಲಾಗಿರುವ ವಿಧಾನ ಪರಿಷತ್ ಶಾಸಕರ ಸ್ಥಾನಕ್ಕೆ ಎರಡು ಕ್ಷೇತ್ರ ದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯಗಳಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಹೇಳಿದರು. ಕಾರ್ಯಕರ್ತರು ಈ ಬಗ್ಗೆ ಮತದಾರರ ಮನೆಗಳಿಗೆ ತೆರಳಿ ಮತಯಾಚನೆ ಮಾಡುವಂತೆ ಅವರು ಕರೆ ನೀಡಿದರು.

ಅವರು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಿಧಾನ ಪರಿಷತ್ ಚುನಾವಣಾ ವೀಕ್ಷಕ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಕೆಪಿಸಿಸಿ ಸದಸ್ಯ ಎಚ್,ವಸಂತ ಬರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ,ಬ್ಲಾಕ್ ಉಪಾಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular