ಕಾರ್ಕಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಹಣಕಾಸು ಹೊಂದಾಣಿಕೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆಸಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿತ್ತು . ಇದೀಗ ರಸ್ತೆಯಲ್ಲಿ ಓಡಾಡುವರಿಂದ ಸುಂಕ ವಸೂಲಾತಿ ಇಳಿದಿದ್ದು ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಇಳಿದಿದೆ. ರಸ್ತೆಯಲ್ಲಿಓಡಾಡುವವರಿಗೂ ಬರೆ ಎಳೆಯಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಬೆಳ್ಮಣ್ ಟೋಲ್ ಸಂಗ್ರಹ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ಸಿನಿಂದ ಎರಡು ದಿನದ ಹಿಂದೆ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತ್ರತ್ವದಲ್ಲೆ ಪ್ರತಿಭಟನೆ ನಡೆದಿತ್ತು. ನಿಮ್ಮದೆ ಸರಕಾರ ವಿರುದ್ದ ನೀವೆ ಪ್ರತಿಭಟನೆಗೆ ಬೀದಿಗೆ ಇಳಿದಿರುವುದು ನೋಡಿದರೆ ನಿಮ್ಮ ಸರಕಾರದ ಸಚಿವರುಗಳು ನಿಮ್ಮ ಕೈಗೆ ಸಿಗುತಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದನೆಲ್ಲ ಗಮನಿಸುವಾಗ ಕಾಂಗ್ರೆಸ್ ಸರಕಾರ ಸಂಪೂರ್ಣ ಕೋಮ ಸ್ಥಿತಿಗೆ ತಲುಪಿದೆ ಎನ್ನುವುದನ್ನು ಗೊತ್ತಾಗುತ್ತದೆ. ನಿಮ್ಮದೆ ಸರಕಾರದ ವಿರುದ್ದ ನೀವೆ ಪ್ರತಿಭಟನೆಗೆ ಬೀದಿಗಿಳಿದಿದ್ದೀರಿ. ಇಂತಹದ್ದೊಂದು ಹೀನಾಯ ಪರಿಸ್ಥಿತಿ ಕಾಂಗ್ರೆಸ್ಸಿಗೆ ಈಗ ಬಂದಿದೆ. ಕಾಂಗ್ರೆಸ್ಸಿನ ಮಾಜಿ ಜನಪ್ರತಿನಿಧಿಗಳು, ಸ್ಥಳಿಯ ನಾಯಕರು ಕಾರ್ಯಕರ್ತರು ಎಲ್ಲರು ಗೊಂದಲದಲ್ಲಿದ್ದು ಯಾರಿಗೆ ಮನವಿ ಕೊಡುವುದು ಎನ್ನುವುದು ಸಹ ತಿಳಿಯದ ಸ್ಥಿತಿ ಈಗ ಕಾಂಗ್ರೆಸ್ಸಿಗರಿಗೆ ಬಂದಿದೆ. ತಮ್ಮದೆ ಸರಕಾರ ಆಡಳಿತದಲ್ಲಿದೆ ಎನ್ನುವ ಗೊಡವೆಯೂ ಕಾಂಗ್ರೆಸ್ಸಿಗರಿಗಿಲ್ಲ ಎಂದವರು ಹೇಳಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಟೋಲ್ ಸಂಗ್ರಹ ವಿಚಾರ ಪ್ರಸ್ತಾಪವಾದಗ ಅದಕ್ಕೆ ವಿರೋಧ ವ್ಯಕ್ತವಾದಗ ಸ್ಥಳಿಯರ ಅಭಿಪ್ರಾಯ ಪಡೆದು, ವಿಶ್ವಾಸಕ್ಕೆ ತೆಗೆದುಕೊಂಡು ಟೋಲ್ ಸಂಗ್ರಹ ನಿರ್ಧಾರ ವಾಪಸ್ ಪಡೆಯುವಂತೆ ಮಾಡಲಾಗಿತ್ತು. ಟೋಲ್ ಸಂಗ್ರಹಕ್ಕೆ ತಡೆ ತರಲಾಗಿತ್ತು. ಆದರೀಗ ರಾಜ್ಯ ಸರಕಾರದ ಬೊಕ್ಕಸ ಬರಿದಾಗಿದ್ದು ಗ್ಯಾರಂಟಿ ಹಣ ತುಂಬಲು ಟೋಲ್ ಕರ ಸಂಗ್ರಹ ಮೂಲಕ ರಸ್ತೆ ವಸೂಲಾತಿಗೆ ಇಳಿದಿದೆ. ವಾಹನ ಸವಾರರಿಗೆ ಬರೆ ಎಳೆಯಲು ಮುಂದಾಗಿದೆ ಎಂದಿದ್ದಾರೆ. ಸರಕಾರ ಈ ಕೂಡಲೇ ಪಡುಬಿದ್ರಿ- ಕಾರ್ಕಳ ನಡುವೆ
ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಿರ್ಧಾರ ಕೈ ಬಿಡುವಂತೆ ಅವರು ಆಗ್ರಹಿಸಿದ್ದಾರೆ.
ವಿರೋಧದ ನಡುವೆಯೂ ಜಾರಿಗೆ ಮುಂದಾದರೆ ಮುಂದೆ ತೀವ್ರ ಪ್ರತಿರೋಧ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.