ಗೋಮಾತೆಯ ಕಣ್ಣಿರಿನ ಶಾಪದಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ
ಕಾರ್ಕಳ : ಕರಾವಳಿಯ ಗಂಡು ಕಲೆ ಎಂದೇ ಖ್ಯಾತಿ ಪಡೆದ ಯಕ್ಷಗಾನ ಕಲೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪ್ರರ‍್ಶನವಾಗುತ್ತದೆ. ಆದರೆ ಕರ‍್ಕಳ ತಾಲೂಕಿನ ಶರ‍್ಲಾಲು ಗ್ರಾಮದ ಮುಂಡ್ಲಿ ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರರ‍್ಶನದ ನಡುವೆ ಕಾಂಗ್ರೆಸ್ ನಾಯಕನ ಆದೇಶದ ಮೇರೆಗೆ ಮಧ್ಯಪ್ರವೇಶಿಸಿದ ಪೊಲೀಸರು ಏಕಾಎಕಿ ಪ್ರರ‍್ಶನವನ್ನೇ ರದ್ದುಪಡಿಸಲು ಸೂಚಿಸಿದಾಗ ನೆರೆದಿದ್ದ ಯಕ್ಷಗಾನದ ಅಭಿಮಾನಿಗಳ ವಿರೋಧದಿಂದ ವಾಪಸ್ ಆದ ಪೊಲೀಸರು ಸದರಿ ಯಕ್ಷಗಾನದ ಆಯೋಜಕರ ಹಾಗೂ ಅಭಿಮಾನಿಗಳ ಮೇಲೆ ಮೊಕದ್ದಮೆಗಳನ್ನು ದಾಖಲಿಸಿ, ಕಲೆಗೆ ಅವಮಾನ ಮಾಡಿರುವುದು ಖಂಡನೀಯ ಎಂದು ಕರ‍್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.
ಯಕ್ಷಗಾನ ಕಲೆಯು ಕಾನೂನಿನ ಯಾವುದೇ ಕಟ್ಟುಪಾಡುಗಳಿಲ್ಲದೇ ನಡೆಯುವ ಕಲೆಯಾಗಿದೆ. ಪ್ರತಿನಿತ್ಯ ಹತ್ತಾರು ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರರ‍್ಶನಗಳು ಅಡೆತಡೆಗಳಿಲ್ಲದೇ ನಡೆಯುತ್ತಿರುತ್ತವೆ. ಆದರೆ ಕಾಂಗ್ರೆಸ್ಸಿಗರ ಈ ರ‍್ತನೆಯಿಂದ ಇನ್ನುಮುಂದೆ ಯಕ್ಷಗಾನ ಕಲೆಯ ಪ್ರರ‍್ಶನಕ್ಕೂ ಸಂಚಕಾರ ಬಂದರೆ ಅಚ್ಚರಿಯಿಲ್ಲ. ಯಕ್ಷಗಾನ ಪ್ರರ‍್ಶನಕ್ಕೆ ಅಡ್ಡಿಪಡಿಸಿದವರು ಇನ್ನುಮುಂದೆ ಕೋಲ, ನೇಮ, ಜಾತ್ರೆ ಹಾಗೂ ದೇವರ ಉತ್ಸವಗಳನ್ನೂ ಕೂಡ ನಿಷೇಧಿಸುವ ದಿನ ದೂರವಿಲ್ಲ ಎಂದು ನವೀನ್ ನಾಯಕ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ರ‍್ಕಾರ ಆಡಳಿತಕ್ಕೆ ಬಂದ ದಿನಂದಿದಲೇ ಹಿಂದೂ ಸಮಾಜದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ. ವಕ್ಫ್ ವಿಚಾರದಲ್ಲಿ ರೈತರ ಹಾಗೂ ಮಠ ಮಂದಿರಗಳ ಜಮೀನು ಕಬಳಿಸಲು ಹುನ್ನಾರ ನಡೆಸಲಾಯಿತು. ಅಲ್ಲದೇ ಹಿಂದೂಗಳು ಪೂಜಿಸುವ ಪವಿತ್ರ ಗೋಮಾತೆಯ ಕೆಚ್ಚಲನ್ನು ಕತ್ತರಿಸಿದ ಪರಮಪಾಪಿಯನ್ನು ಕಾಂಗ್ರೆಸ್ ರ‍್ಕಾರ ರಕ್ಷಿಸುವ ಪ್ರಯತ್ನ ಮಾಡುತ್ತಿದೆ. ತನ್ನನ್ನು ಕೊಲ್ಲಲು ಬರುವ ಕಟುಕನಿಗೂ ಅಮೃತ ಸಮಾನ ಹಾಲನ್ನು ನೀಡುವ ಗೋಮಾತೆಯ ಕಣ್ಣೀರಿನ ಶಾಪ ರಾಜ್ಯ ಕಾಂಗ್ರೆಸ್ ರ‍್ಕಾರಕ್ಕೆ ಖಂಡಿತವಾಗಿ ತಟ್ಟಲಿದೆ ಎಂದು ನವೀನ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.