ಉಡುಪಿ :ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಶಿವಪುರದಲ್ಲಿ ಶ್ರೀ ಶಂಕರಲಿಂಗೇಶ್ವರ ದೇವರ ಪುನಃಪ್ರತಿಷ್ಠಾಷ್ಟಬಂಧ ಹಾಗೂ ಬ್ರಹ್ಮ ಕುಂಭಾಭಿಷೇಕ ಮತ್ತು ಶ್ರೀ ಮನ್ಮಹಾರಥೋತ್ಸವವು ದಿನಾಂಕ 11.4.2024 ಗುರುವಾರದಿಂದ 27.4.2024 ಶನಿವಾರದ ವರೆಗೆ ನಡೆಯಲಿದೆ.
ದಿನಾಂಕ 12.4.2024 ಶುಕ್ರವಾರ ಸಂಜೆ 4.30 ರಿಂದ ಭಾಗವತ ಪ್ರವಚನ 7.00 ರಿಂದ ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ ನಡೆಯಲಿದೆ. 13.4.2024 ಶನಿವಾರ ಸಂಜೆ 7.00 ರಿಂದ ಸ್ಥಳೀಯ ಕಲಾವಿದರಿಂದ “ಗುತ್ತುದ ಗುರ್ಕಾರೆ” ತುಳು ನಾಟಕ ನಡೆಯಲಿದೆ. 14.04.2024 ಭಾನುವಾರ 6.00ರಿಂದ ನೃತ್ಯೂಲ್ಲಾಸ ಮತ್ತು 7.00 ರಿಂದ ಯಕ್ಷಗಾನ ಜಟಾಯುಮೋಕ್ಷ , ಮೀನಾಕ್ಷಿ ಕಲ್ಯಾಣ . ದಿನಾಂಕ 15.04.2024 ಸೋಮವಾರ ಬೆಳ್ಳಗ್ಗೆ 12.00ರಿಂದ ಧಾರ್ಮಿಕ ಉಪನ್ಯಾಸ , ಸಂಜೆ 5.00 ರಿಂದ ಸುಗಮ ಸಂಗೀತ, ರಾತ್ರಿ 8.00 ರಿಂದ ನಾಟ್ಯಂಜಲಿ – ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ . ದಿನಾಂಕ 16.04.2024 ಮಂಗಳವಾರ ಬೆಳಿಗ್ಗೆ 10.00ರಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 6.00 ರಿಂದ ನಾಟ್ಯ ವೈವಿಧ್ಯ, 7.00ರಿಂದ ಯಕ್ಷಗಾನ ಶಿವಭಕ್ತ ವೀರಮಣಿ , ದಿನಾಂಕ 17.04.2024 ಬುಧವಾರ ಬೆಳಿಗ್ಗೆ 10.00 ರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ 8.00 ರಿಂದ ಭಕ್ತಿ ಭಾವ ಗಾಯನ. ದಿನಾಂಕ 18.04.2024 ಗುರುವಾರ ಬೆಳಿಗ್ಗೆ ನಾದಸ್ವರ ವಾದನ, ರಾತ್ರಿ 8.00ಕ್ಕೆ ನೃತ್ಯಾರಧನೆ . ದಿನಾಂಕ 19.04.2024 ಶುಕ್ರವಾರ ಭಜನೋತ್ಸವ ಮತ್ತು ಹಲವು ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆ ಯಿಂದ ನಡೆಯಲಿದೆ.