Thursday, July 25, 2024
Homeಅಪರಾಧಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು : ಗುಂಡು ಹಾರಿಸಿ ಕೊಂದ ಪತ್ನಿ

ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಸಂಚು : ಗುಂಡು ಹಾರಿಸಿ ಕೊಂದ ಪತ್ನಿ

ಮಹಿಳೆ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಕೊಲೆಗೆ ಸಂಚು ರೂಪಿಸಿದ್ದಳು, ಅಪಘಾತ ಮಾಡಿ ಸಾಯಿಸಬೇಕೆಂದರೂ ಹೇಗೋ ಬದುಕುಳಿದಿದ್ದ ಗಂಡನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರ್ಯಾಣದ ಪಾಣಿಪತ್​ನಲ್ಲಿ ನಡೆದಿದೆ. 2021ರಲ್ಲಿ ಹರಿಯಾಣದ ಪಾಣಿಪತ್‌ನಲ್ಲಿ ಪತಿಯನ್ನು ಕೊಂದಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

2021ರ ಅಕ್ಟೋಬರ್​ 5ರಂದು ಪಂಜಾಬ್ ನೋಂದಾಯಿತ ವಾಹನವು ವಿನೋದ್ ಬರಾಡ ಅವರಿಗೆ ಡಿಕ್ಕಿ ಹೊಡೆದಿತ್ತು, ಘಟನೆಯಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡರೂ ಹೇಗೋ ಬದುಕುಳಿದಿದ್ದರು. ಎರಡು ತಿಂಗಳ ನಂತರ ಡಿಸೆಂಬರ್​ 15ರಂದು ವಿನೋದ್​ ಅವರನ್ನು ಪಾಣಿಪತ್​ನಲ್ಲಿರುವ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ವಿನೋದ್ ಪತ್ನಿ ನಿಧಿ ತನ್ನ ಪ್ರಿಯಕರ ಸುಮಿತ್ ಜೊತೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅಪಘಾತ ಮಾಡಿದ್ದು ಇವರೇ ಬಳಿಕವೂ ಗಂಡ ಸತ್ತಿಲ್ಲವೆನ್ನುವ ಕೋಪದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

2021 ರ ಡಿಸೆಂಬರ್‌ನಲ್ಲಿ ವಿನೋದ್ ಅವರ ಚಿಕ್ಕಪ್ಪ ವೀರೇಂದ್ರ ಅವರು ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ವಿನೋದ್ ಅಪಘಾತದ ನಂತರ ಚಾಲಕ ದೇವ್ ಸುನರ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದರು.

ಡಿಸೆಂಬರ್ 15, 2021 ರಂದು, ದೇವ್ ಸುನರ್ ಪಿಸ್ತೂಲ್ ಹಿಡಿದು ವಿನೋದ್ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿ ವಿನೋದ್ ನ ಸೊಂಟ ಮತ್ತು ತಲೆಗೆ ಗುಂಡು ಹಾರಿಸಿದ್ದ. ವಿನೋದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ದೇವ್ ಸುನರ್ ಅವರು ಸುಮಿತ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು, ವಿನೋದ್ ಅವರ ಪತ್ನಿ ನಿಧಿ ಅವರೊಂದಿಗೆ ಆಗಾಗ್ಗೆ ಸಂವಹನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಜೂನ್ 7 ರಂದು, ಪೊಲೀಸರು ಸುಮಿತ್‌ನನ್ನು ಬಂಧಿಸಿದರು ಮತ್ತು ವಿಚಾರಣೆಯ ಸಮಯದಲ್ಲಿ, ವಿನೋದ್ ಅಪಘಾತಕ್ಕೆ ಸಂಚು ರೂಪಿಸಿದ್ದಾಗಿ ಮತ್ತು ನಂತರ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ನಿಧಿ ಮತ್ತು ಸುಮಿತ್ ಇಬ್ಬರನ್ನೂ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

RELATED ARTICLES
- Advertisment -
Google search engine

Most Popular