ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಭೀಮರಾವ್ ವೇದಿಕೆ ಮೂಲ್ಕಿ ಇದರ ಜಂಟಿ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಮಾತ ಅಮೃತಮಯಿ ನಗರದ ಅಂಬೇಡ್ಕರ್ ಭವನದಲ್ಲಿ ಜರಗಿತು. ದೀಪ ಬೆಳಗಿಸುವ ಮೂಲಕ ಡಾ. ಬಿ. ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಜನೆ ಮಾಡುವ ಮೂಲಕ ಆಚರಿಸಲಾಯಿತು. ತದನಂತರ ಮಾತ ಅಮೃತಬಾಯಿ ನಗರದ ಶಿಶುಮಂದಿರ ಅಂಗನವಾಡಿ ಕೇಂದ್ರಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಸ್ಟೀಲ್ ರಾಕ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಬಪ್ಪನಾಡು ಅಧ್ಯಕ್ಷರಾದ ಸುಧೀರ್ ಬಾಳಿಗ ಕಾರ್ಯದರ್ಶಿ ಪುಷ್ಪರಾಜ್ ಚೌಟ, ಶಿವಪ್ರಸಾದ್, ವಲಯ ಅಧ್ಯಕ್ಷರಾದ ಪ್ರತಿಭಾ ಹೆಬ್ಬಾರ್ ,ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಭಾಸ್ಕರ್ ಕಾಂಚನ್ ಪ್ರಕಾಶ್ ಅಧ್ಯಕ್ಷರು ಭೀಮರಾವ್ ವೇದಿಕೆ, ಶಂಕರ್ ,ಲೋಕೇಶ್, ಸಂಜೀವ ಕಾರ್ನಾಡು, ಜಯ ಕಾರ್ನಾಡು, ಅಂಗನವಾಡಿ ಸಂಚಾಲಕಿ ಮಾಹದೇವಿ ಮೊದಲಾದವರು ಉಪಸ್ಥಿತರಿದ್ದರು.