ಬಂಟ್ವಾಳ, ನವೆಂಬರ್ 26: ಭಾರತದ ಸಂವಿಧಾನವು ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನವಾಗಿದ್ದು
ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಉತ್ತಮ ಬದುಕನ್ನು ಕಟ್ಟುವುದರ ಜೊತೆಗೆ ಪ್ರಜಾಪ್ರಭುತ್ವವನ್ನು
ಬಲಪಡಿಸಿಕೊಳ್ಳಬೇಕೆಂದು ಎಸ್ .ವಿ .ಎಸ್ ಪದವಿ ಪೂರ್ವ ಕಾಲೇಜನ ಪ್ರಾಂಶುಪಾಲ
ಸುದರ್ಶನ್. ಬಿ ಹೇಳಿದರು. ಅವರು ಬಂಟ್ವಾಳ ಎಸ್. ವಿ .ಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ
ಸೇವಾ ಯೋಜನೆ ಘಟಕದಿಂದ ಆಯೋಜಿಸಲಾದ ‘ಸಂವಿಧಾನ ದನಾಚರಣೆ’ಯನ್ನು ಉದ್ದೇಶಿಸಿ
ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಲಕ್ಷ್ಮೀ ನಾರಾಯಣ .ಎನ್ ಮತ್ತು
ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮತ್ತು ಕನ್ನಡ ಉಪನ್ಯಾಸಕ ಶಶಿಧರ್. ಎಸ್ ಸ್ವಾಗತಿಸಿದರು. ರಾಜ್ಯಶಾಸ್ತ್ರ, ಉಪನ್ಯಾಸಕಿ. ಶ್ರೀಮತಿ ರೂಪ ನಿರೂಪಿಸಿ , ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿ ವಂದಿಸಿದರು.