26.6 C
Udupi
Tuesday, November 29, 2022
spot_img

ಬಂಟ್ವಾಳ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾಗತ ಕೋರುವ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಖಂಡನೆ

ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಅಕ್ಕ – ಪಕ್ಕ ಬೇರೆ ಸ್ಥಳವಿದ್ದರೂ ಬಂಟ್ವಾಳ ಪುರಸಭೆ ಯ ಹಠ – ಮಾರಿ ಧೋರಣೆಯಿಂದ ತಾಲೂಕು ಆಡಳಿತ ಮಿನಿ ವಿಧಾನ ಸೌಧದ ಮುಂಬಾಗ ಸಾರ್ವಜನಿಕ ರಂಗಮಂದಿರ ಇದ್ಧ ಜಾಗದಲ್ಲಿ ಸಾರ್ವಜನಿಕ ಶೌಚಾಲಯವನ್ನು ಎಲ್ಲೋ ಬಂದು ಬದಿಯಲ್ಲಿ ನಿರ್ಮಿಸ ಬೇಕಾದ ಸ್ಥಳದಲ್ಲಿ ನಿರ್ಮಿಸ ದೇ ಜನ ಸಾಮಾನ್ಯರು ನಡೆದುಕೊಂಡು ಹೋಗುವ ಫುಟ್ ಪಾತ್ ಸ್ಥಳದಲ್ಲಿ ಹಾಗೂ ಮಿನಿ ವಿಧಾನ ಸೌಧದ ಎದುರಿನಲ್ಲಿ ನಿರ್ಮಿಸಿರುವುದು ಖಂಡನೀಯವಾಗಿದೆ .

ಇಷ್ಟೊಂದು ಸುಂದರವಾದ ಮಿನಿ ವಿಧಾನದ ಹಾಗೂ ಸಾರ್ವಜನಿಕರ ಚಲನ – ವಲನ ವಿರುವಂತಹ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಹಾಗೂ ಫುಟ್ ಪಾತ್ ಸ್ಥಳವನ್ನು ಆಯ್ಕೆ ಮಾಡಿರುವುದು ನಿಜವಾಗಿಯೂ ವಿಪರ್ಯಾಸವೇ ? ಶೌಚಾಲಯ ಕಟ್ಟಲು ಮಿನಿ ವಿಧಾನ ಸೌಧದ ಎದುರೇ ಬೇಕಿತ್ತೆ? ಬೇರೆ ಸ್ಥಳ ಸಿಗಳಿಲ್ಲವೇ ? ಈ ಶೌಚಾಲಯ ಸಾರ್ವಜನಿಕರಿಗೆ ಅಸಹ್ಯ ಮಾಡುವಂತಾಗಿದೆ ಇದನ್ನು ಸಾರ್ವಜನಿಕರು ಹಾಗೂ ಮಹಿಳೆಯರು ಬಳಸದೆ ಉಪಯೋಗ ಶುನ್ಯವಾಗುವ ಸಾಧ್ಯತೆಯಿದೆ ಮಿನಿ ವಿಧಾನ ಸೌಧದ ಒಳಗಿರುವ ಶೌಚಾಲಯ ವು ಶುಚಿತ್ವ ಇರುವುದಿಲ್ಲ ಶೌಚಾಲಯಕ್ಕೆ ಸಾರ್ವಜನಿಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ ಮೊದಲು ಒಳಗಿರುವ ಶೌಚಾಲಯವನ್ನು ಶುಚಿತ್ವ ಗೊಳಿಸಬೇಕೆಂದು ಹಾಗೂ ಮಿನಿ ವಿಧಾನ ಸೌದದ ಎದುರು ಮತ್ತು ಫುಟ್ ಪಾತ್ ನಲ್ಲಿ ನಿರ್ಮಿಸಿತಿರುವ ಶೌಚಾಲಯವನ್ನು ಕೂಡಲೇ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕೆಂದು J.D.U ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮುಖಂಡರಾದ ಸುಪ್ರೀತ್ ಕುಮಾರ್ ಪೂಜಾರಿಯವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ .
ಸುಪ್ರೀತ್ ಕುಮಾರ್ ಪೂಜಾರಿ.

               

 

     

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles