ಸುರತ್ಕಲ್ : ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ ಇಲ್ಲಿ ಎಪ್ರಿಲ್ 18 ರಿಂದ ಎಪ್ರಿಲ್ 26 ರವರೆಗೆ ನಡೆಸಲು ಉದ್ದೇಶಿಸಿರುವ ಬ್ರಹ್ಮಕಲೋತ್ಸವ,ನಾಗಮಂಡಲೋತ್ಸವ,ವಿರಾಟ್ ಭಜನೋತ್ಸವ ಮತ್ತು ಜಾರಂದಾಯ ನೇಮೋತ್ಸವ ನಡೆಯಲಿದ್ದು ಆ ಪ್ರಯುಕ್ತ ಎಪ್ರೀಲ್ 18 ರಂದು ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮೂಲಕ ದೇವಸ್ಥಾನಕ್ಕೆ ಸಮರ್ಪಣೆಯಾಗಲಿದ್ದು ಈ ಬಗ್ಗೆ ಸಮಾಲೋಚನೆ ಸಭೆಯು ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಧರ್ಮೆಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿ ಮಾತನಾಡಿ ಎಪ್ರೀಲ್ 18 ರಿಂದ ಎಪ್ರೀಲ್ 26 ರವರೆಗೆ ನಡೆಯುವ ಬ್ರಹ್ಮಕಲಶ ,ನಾಗಮಂಡಲ,ಜಾತ್ರ ಮಹೋತ್ಸವದಲ್ಲಿ ತಾವುಗಳು ಎಲ್ಲರೂ ಭಾಗವಹಿಸಿ ವಿಜೃಂಭಣೆಯಿಂದ ಅಚ್ಚು ಕಟ್ಟಾಗಿ ನಡೆಸಲು ತಮ್ಮೆಲ್ಲರ ಸಹಕಾರ ಅಗತ್ಯ ಆ ನಿಟ್ಟಿನಲ್ಲಿ ಮೊದಲ ದಿನ ದೇವರಿಗೆ ಹೊರೆಕಾಣಿಕೆ ಶೋಭಾ ಯಾತ್ರೆ ಮೂಲಕ ಸಮರ್ಪಣೆ ಇದು ಯಶಸ್ವಿಯಾಗಿ ನಡೆಯಲು ತಾವುಗಳು ಶ್ರಮಿಸಬೇಕು ಎಂದರು ಬ್ರಹ್ಮಕಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ,ಕಾರ್ಯಾಧ್ಯಕ್ಷರಾದ ಪ್ರಶಾಂತ್ ಮುಡಾಯಿಕೊಡಿ, ಉದ್ಯಮಿ ದೇವೇಂದ್ರ ಕೆ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಧಾಮ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಕುಮಾರ್ ಭಂಡಾರಿ,ಜಿ.ಕೆ.ಸುಂದರ್,ದಯಾನಂದ, ಹೊನ್ನಯ್ಯಕೋಟ್ಯಾನ್,ಅನುರಾಧ,ಹೇಮಾವತಿ ಮುಂತಾದವರು ಉಪಸ್ಥಿತರಿದ್ದರು, ಸುಧಾಕರ ಕಾಮತ್ ಕಾರ್ಯಕ್ರಮ ನಿರೂಪಿಸಿದರು ಹೊರೆಕಾಣಿಕೆ ಸಮಿತಿಯ ಸಹ ಸಂಚಾಲಕ ಪ್ರವೀಣ್ ಕೃಷ್ಣಾಪುರ ಧನ್ಯವಾದ ಸಮರ್ಪಿಸಿದರು