ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಆ. 17 ರ ಸಿಂಹ ಸಂಕ್ರಮಣದಂದು ಲಕ್ಷ ತುಳಸಿ ಅರ್ಚನೆ ಹಾಗೂ ದಾನಿಗಳಿಂದ ನೂತನವಾಗಿ ಆರಂಭಿಸಿದ ವಿದ್ಯಾನಿಧಿ ಯೋಜನೆಯ ಪೂರ್ವ ತಯಾರಿ ಬಗ್ಗೆ ಸಮಾಲೋಚನಾ ಕಾರ್ಯಕ್ರಮ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಇಂದು ಎಂ ಮಾತನಾಡಿ ವಿದ್ಯಾನಿಧಿ ಯೋಜನೆ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯದ ಅಭಿನಂದನೀಯವಾಗಿದ್ದು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅಗತ್ಯ ಎಂದರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜೀ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ ದೇವಸ್ಥಾನದಲ್ಲಿ ಮುಂಬೈ ದಾನಿಗಳ ಸಹಕಾರದಿಂದ ವಿದ್ಯಾನಿಧಿಗೆ ಚಾಲನೆ ನೀಡಲಾಗಿದ್ದು ಶಿಮಂತೂರು ಗ್ರಾಮದ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಗುವುದು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ, ಸದಸ್ಯ ಗೋಪಿನಾಥ ಪಡಂಗ, ಮತ್ತಿತರರು ಉಪಸ್ಥಿತರಿದ್ದರು ಮೋಹನ್ ಕೋಟ್ಯಾನ್ ಶಿಮಂತೂರು ನಿರೂಪಿಸಿದರು.