Sunday, July 21, 2024
Homeಮಂಗಳೂರುನಿಷ್ಪಕ್ಷಪಾತ ಚುನಾವಣೆಗೆ ಸಹಕರಿಸಿ : ಡಾ|| ಚೂಂತಾರು

ನಿಷ್ಪಕ್ಷಪಾತ ಚುನಾವಣೆಗೆ ಸಹಕರಿಸಿ : ಡಾ|| ಚೂಂತಾರು

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ಎನ್ನುವುದು ಹಬ್ಬವಿದ್ದಂತೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಪ್ರಭುಗಳನ್ನು ಆಯ್ಕೆ ಮಾಡುವ ವಿಶಿಷ್ಟ ಅವಕಾಶ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರಿಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅತ್ಯಂತ ಮಹತ್ವದ ಮತ್ತು ಪಾವಿತ್ರ್ಯತೆ ಇರುತ್ತದೆ. ಈ ಕಾರಣದಿಂದ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಆಡಳಿತ ಯಂತ್ರ ಶ್ರಮಿಸುತ್ತದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆ ಗೃಹರಕ್ಷಕರು ಸೇರಿ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ನ್ಯಾಯಯುತವಾಗಿ, ಕಾನೂನು ಬದ್ಧವಾಗಿ ನಡೆಸಲು ಬದ್ಧರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಗೃಹರಕ್ಷಕರಿಗೆ ಚುನಾವಣೆ ಕರ್ತವ್ಯ ಅತ್ಯಂತ ಮಹತ್ವದ್ದಾಗಿರುತ್ತದೆ. ಎಲ್ಲಾ ಗೃಹರಕ್ಷಕರು ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕಾಗಿದೆ ಎಂದು ದ.ಕ. ಜಿಲ್ಲಾ ಸಮಾದೇಷ್ಟ ಚೂಂತಾರು ನ ಸಮಾದೇಷ್ಟರಾದ ಡಾ ಮುರಲಿ ಮೋಹನ್ ನುಡಿದರು.

ದಿನಾಂಕ 15/13/2024ನೇ ಶುಕ್ರವಾರದಂದು ಡಾ ಚೂಂತಾರು ಅವರು ಮೂಲ್ಕಿ ಗ್ರಹರಕ್ಷಕ ದಳ ಕಛೇರಿಗೆ ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. ಮುಂಬರುವ ಲೋಕ ಸಭಾ ಚುನಾವಣೆಗೆ ಹೆಚ್ಚಿನ ಸಂಖೆಯಲ್ಲೀ ಗ್ರಹ ರಕ್ಷಕರನ್ನು ನೀಡಲು ಘಟಕಾಧಿಕಾರಿ ಲೋಕೇಶ್ ಅವರಿಗೆ ಆದೇಶಿಸಿದರು. ಈ ಸಂದರ್ಭದಲ್ಲಿ ಮೂಲ್ಕಿ ಘಟಕದ 35 ಗ್ರಹರಕ್ಷಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular