Monday, February 17, 2025
Homeಧಾರ್ಮಿಕಏತಡ್ಕ ಸದಾಶಿವ ದೇವಸ್ಥಾನದ ಶಿವ ಪಂಚಾಕ್ಷರಿ ತುಲು ಲಿಪಿ ಲೇಖನ ಯಜ್ಞಕ್ಕೆ ಜೈ ತುಲುನಾಡ್ ನಿಂದ ಸಹಕಾರ

ಏತಡ್ಕ ಸದಾಶಿವ ದೇವಸ್ಥಾನದ ಶಿವ ಪಂಚಾಕ್ಷರಿ ತುಲು ಲಿಪಿ ಲೇಖನ ಯಜ್ಞಕ್ಕೆ ಜೈ ತುಲುನಾಡ್ ನಿಂದ ಸಹಕಾರ

ತುಳುನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕಾಸರಗೋಡು ಜಿಲ್ಲೆಯ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ 11 ರಿಂದ 16 ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರಗಲಿದ್ದು ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ.ಜೀರ್ಣೋದ್ದಾರ ಸಮಿತಿಯು ಈ ಸಂದರ್ಭದಲ್ಲಿ ಶಿವ ಪಂಚಾಕ್ಷರಿ ಲೇಖನ ಯಜ್ಞ ನನ್ನು ಮಾಡಲು ನಿರ್ಧರಿಸಿದ್ದು ಇದರ ಪೂರ್ವಭಾವಿ ಸಭೆಯು ತಾ 12-01-2025 ರಂದು ಕರೆಯಲಾಯಿತು. ಆ ಸಂದರ್ಭದಲ್ಲಿ ಜೈ ತುಲುನಾಡ್ ಕಾಸರಗೋಡು ವಲಯ ಸಮಿತಿಯನ್ನು ತುಲು ಲಿಪಿಯಲ್ಲಿ ಶಿವ ಪಂಚಾಕ್ಷರಿಯನ್ನು ಕಲಿಸಿಕೊಡುವರೇ ಆಹ್ವಾನಿಸಿದ್ದರು. ಇದರ ಉದ್ಘಾಟನಾ ಕಾರ್ಯಕ್ರಮವು ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಆಡಳಿತ ಮುಕ್ತೆಸರರಾದ ವೈ ಶ್ಯಾಮ್ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು, ಯಕ್ಷಗುರುಗಳೂ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತರೂ ಆದ ಮದಂಗಲ್ಲು ಆನಂದ ಭಟ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಲುನಾಡ್ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ, ತುಲು ಲಿಪಿ ಶಿಕ್ಷಕಿಯೂ ಆದ ವಿನೋದ ಪ್ರಸಾದ್ ರೈಯವರು ತುಲು ಲಿಪಿಯ ಬಗ್ಗೆ ಮಾಹಿತಿಯನ್ನು ನೀಡಿ ನಂತರ, ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿಯನ್ನು ತುಲು ಲಿಪಿಯಲ್ಲಿ ಬರೆದು ತೋರಿಸುವ ಮೂಲಕ ತುಲು ಲಿಪಿ ಶಿವ ಪಂಚಾಕ್ಷರಿ ಲೇಖನ ಯಜ್ಞಕ್ಕೆ ಚಾಲನೆಯನ್ನು ನೀಡಿದರು. ಜೈ ತುಲುನಾಡ್ ನಾ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸಂಘಟನೆ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತುಲು ಲಿಪಿ ನಾಮಫಲಕವನ್ನು ಅಳವಡಿಸಲು ಬಿನ್ನಹ ದ ಓಲೆಯನ್ನು ಸಮಿತಿಯಅಧ್ಯಕ್ಷರಿಗೆ ನೀಡಲಾಯಿತು. ಡಾ ಕೃಷ್ಣ ಮೂರ್ತಿ ವೈ.ವಿ. ರವರು ಸ್ವಾಗತಿಸಿ, ಜೈ ತುಲುನಾಡ್ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷರಾದ ಕುಶಲಾಕ್ಷಿ ವಿ ಕಣ್ವತೀರ್ಥ ರವರು ವಂದಿಸಿದರು.ಕ್ಷೇತ್ರದ ಮಹಿಳಾ ಘಟಕದ ಸದಸ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಾಗಾರ ವನ್ನು ಸಮಿತಿಯ ಸಂಯೋಜಕರಾದ ಶ್ರೀಯುತ.ಚಂದ್ರಶೇಖರ ಭಟ್ ಏತಡ್ಕ ನಿರೂಪಿಸಿದರು, ಜೈ ತುಲುನಾಡ್ ನಾ ಸದಸ್ಯರುಗಳಾದ ವಿಜಯರಾಜ್ ಪುಣಿಂಚತ್ತಾಯ, ಕಾರ್ತಿಕ್ ಬದಿಯಡ್ಕ , ಉತ್ತಮ್ ನೀರ್ಚಾಲು, ಜಗನ್ನಾಥ ಕುಲಾಲ್ ಬದಿಯಡ್ಕ ರವರು ಸಹಕರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ತುಲು ಲಿಪಿ ಪಂಚಾಕ್ಷರಿ ಲೇಖನ ಯಜ್ಞದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು.ಭಾಗವಹಿಸಿದ ಎಲ್ಲರಿಗೂ ಕ್ಷೇತ್ರದ ಸಮಿತಿಯ ವತಿಯಿಂದ ಪ್ರಮಾಣ ಪತ್ರ ವಿತರಿಸಿದರು. ಜೈ ತುಲುನಾಡ್ ವತಿಯಿಂದ ಎಲ್ಲರಿಗೂ ತುಲು ಲಿಪಿ ಚಾರ್ಟನ್ನು ಉಚಿತವಾಗಿ ಹಂಚಲಾಯಿತು.
ಇದೇ ದಿನ ಜೈ ತುಲುನಾಡ್ ಸಂಘಟನೆಯ ಸದಸ್ಯರು ನಾರಂಪಾಡಿ ಉಮಾಮಹೇಶ್ವರ ಕ್ಷೇತ್ರಕ್ಕೂ ಬೇಟಿನೀಡಿ ತುಲು ಲಿಪಿ ನಾಮಫಲಕವನ್ನು ಅಳವಡಿಸಲು ವಿಜ್ಞಾಪನಾ ಪತ್ರವನ್ನು ನೀಡಿದರು.

RELATED ARTICLES
- Advertisment -
Google search engine

Most Popular