ತುಮಕೂರು: ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಪೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಸರ್ಕಾರಿ ಫ್ರೌಢಶಾಲೆಯಲ್ಲಿ ನಡೆದಿದೆ.
ಅಡುಗೆ ಸಹಾಯಕಿ ಉಮಾದೇವಿ (52)ಗೆ ಗಂಭೀರ ಗಾಯವಾಗಿದ್ದು ಜಯಮ್ಮ (55) ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಹೊಸವರ್ಷದ ಹಿನ್ನೆಲೆ ಮಕ್ಕಳಿಗೆ ಪಲಾವ್ ಮತ್ತು ಪಾಯಸ ಮಾಡಲು ಹೋಗಿ ನಿನ್ನೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅಡುಗೆ ಸಹಾಯಕಿ ಉಮಾದೇವಿಗೆ ಮಧುಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.