Wednesday, October 9, 2024
Homeರಾಜ್ಯಸಮಾದೇಷ್ಟರು ಬಂಟ್ವಾಳ ಘಟಕ ಭೇಟಿ

ಸಮಾದೇಷ್ಟರು ಬಂಟ್ವಾಳ ಘಟಕ ಭೇಟಿ

ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು 22-03-2024ನೇ ಶುಕ್ರವಾರದಂದು ಬಂಟ್ವಾಳ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. ಮುಂಬರುವ 2024ರ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಹಾಗೂ ನಿಷ್ಕ್ರೀಯಗೊಂಡ ಗೃಹರಕ್ಷಕರನ್ನು ಮನವೊಲಿಸಿ ಲೋಕಸಭಾ ಚುನಾವಣೆಗೆ ನಿಯೋಜಿಸುವ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರು ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ ಗುರುತಿನ ಚೀಟಿಯನ್ನು ಮತ್ತು ಭಾಗ ಸಂಖ್ಯೆಯನ್ನು ಘಟಕಾಧಿಕಾರಿಯವರಲ್ಲಿ ನೀಡುವಂತೆ ಆದೇಶಿಸಿದರು. ಬಂಟ್ವಾಳ ಘಟಕದ ಘಟಕಾಧಿಕಾರಿ ಶ್ರೀ ಐತಪ್ಪ ಹಾಗೂ ಬಂಟ್ವಾಳ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular