Saturday, April 26, 2025
HomeUncategorizedಮೂಡಬಿದಿರೆಯ ಹಿಂದು ಮುಖಂಡನ ಮನೆಯಿಂದಲೇ ದನ ಕಳ್ಳತನ ವಾರದೊಳಗೆ ಆರೋಪಿಗಳನ್ನ ಬಂಧಿಸದಿದ್ದರೆ ಹಿಂಜಾವೇ ಯಿಂದ ಪ್ರತಿಭಟನೆಯ...

ಮೂಡಬಿದಿರೆಯ ಹಿಂದು ಮುಖಂಡನ ಮನೆಯಿಂದಲೇ ದನ ಕಳ್ಳತನ ವಾರದೊಳಗೆ ಆರೋಪಿಗಳನ್ನ ಬಂಧಿಸದಿದ್ದರೆ ಹಿಂಜಾವೇ ಯಿಂದ ಪ್ರತಿಭಟನೆಯ ಎಚ್ಚರಿಕೆ

ಮೂಡಬಿದಿರೆಯ ಬೆಳುವಾಯಿ ಹಿಂದು ಮುಖಂಡರಾದ ಸೋಮನಾಥ್ ಕೋಟ್ಯಾನ್ ರವರ ಮನೆಯ ಹಟ್ಟಿಯಿಂದಲೇ ದನ ಕಳ್ಳತನ ಮಾಡಿದ ಪ್ರಕರಣ ನಡೆದಿದ್ದು ಇದೊಂದು ಗಂಭೀರ ಪ್ರಕರಣವಾಗಿದ್ದು ಇದನ್ನು ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ತೀವ್ರವಾಗಿ ಖಂಡಿಸುತ್ತದೆ. ಕಳೆದ ಕೆಲವು ತಿಂಗಳುಗಳಿಂದ ದನ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಈ ಬಗ್ಗೆ ಸಂಬಂಧ ಪಟ್ಟ ಪೋಲಿಸ್ ಇಲಾಖೆ ಕೂಡಲೇ ದನ ಕಳ್ಳರನ್ನು ಹಿಡಿಯಬೇಕು ಹಾಗೂ ಅವರ ಮೇಲೆ ದರೋಡೆ ಕೇಸ್ ಅನ್ನ ದಾಖಲಿಸಬೇಕು ಇಲ್ಲವಾದಲ್ಲಿ ಸಮಾಜವೇ ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಗಲಭೆಗಳು ನಡೆದರೆ ನೇರ ಸಂಬಂಧ ಪಟ್ಟ ಪೋಲಿಸ್ ಇಲಾಖೆ ಅಧಿಕಾರಿಗಳು ಕಾರಣ ವಾಗುತ್ತದೆ, ಎಂದು ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಸಿದ್ದಾರೆ. ಈಗಾಗಲೇ ಹಿಂದೂ ಜಾಗರಣ ವೇದಿಕೆ ಸುಮಾರು ಬಾರಿ ಪೊಲೀಸ್ ಇಲಾಖೆಗೆ ಮನವಿಯನ್ನು ನೀಡಿದೆ.

RELATED ARTICLES
- Advertisment -
Google search engine

Most Popular