Monday, July 15, 2024
Homeರಾಜ್ಯದೇವಸ್ಥಾನದ ಗೋಶಾಲೆಯಿಂದಲೇ ಕಟ್ಟಿ ಹಾಕಿದ್ದ ಗೋವುಗಳ ಕದಿಯಲು ಯತ್ನಿಸಿದ ದುಷ್ಕರ್ಮಿಗಳು!

ದೇವಸ್ಥಾನದ ಗೋಶಾಲೆಯಿಂದಲೇ ಕಟ್ಟಿ ಹಾಕಿದ್ದ ಗೋವುಗಳ ಕದಿಯಲು ಯತ್ನಿಸಿದ ದುಷ್ಕರ್ಮಿಗಳು!

ಕುಂದಾಪುರ: ಕಮಲಶಿಲೆ ದೇವಸ್ಥಾನದ ಕೊಟ್ಟಿಗೆಯಿಂದಲೇ ಗೋವು ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ದೇವಸ್ಥಾನದ ಗೋಶಾಲೆಯಲ್ಲಿ ಕಟ್ಟಿ ಹಾಕಲಾಗಿದ್ದ ದನಗಳ ಕಳ್ಳತನಕ್ಕೆ ಯತ್ನಿಸಲಾಗಿದೆ.
ಇಬ್ಬರು ಕಳ್ಳರು ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ಒಳ ನುಗ್ಗಿದ್ದಾರೆ. ಆ ನಂತರ ಮೂರು ಗೋವುಗಳ ಹಗ್ಗವನ್ನು ಕತ್ತಿಯಿಂದ ತುಂಡರಿಸಿ ಸಾಗಾಟಕ್ಕೆ ಯತ್ನಿಸಿದ್ದರು.
ಕಮಲಶಿಲೆ ದೇವಸ್ಥಾನದಲ್ಲಿ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿಟಿವಿ ಹಾಕಿಸಲಾಗಿದೆ. ಈ ಸಂಸ್ಥೆ ದಿನದ 24 ಗಂಟೆ ಸಿಸಿಟಿವಿ ಮೇಲೆ ನಿಗಾವಿರಿಸಿ, ಪೊಲೀಸ್‌ ಇಲಾಖೆಗೆ ಕಳ್ಳತನ, ಸಂಶಯಾಸ್ಪದ ವ್ಯಕ್ತಿಗಳ ಚಟುವಟಿಕೆ ಬಗ್ಗೆ ಕೂಡಲೇ ಮಾಹಿತಿಯನ್ನು ರವಾನಿಸುತ್ತದೆ. ಹೀಗೆ ಸೈನ್‌ ಇನ್‌ ಸಿಸಿಟಿವಿ ತಂಡ ಗೋವು ಕಳ್ಳತನದ ಬಗ್ಗೆ ಬೀಟ್‌ ಪೊಲೀಸ್‌, ಎಸ್‌ಐ ಮತ್ತು ದೇವಾಲಯದ ಭದ್ರತಾ ವಿಭಾಕದವರಿಗೆ ರವಾನಿಸಿದೆ.
ತಕ್ಷಣವೇ ಭದ್ರತಾ ವಿಭಾಗದವರು ಗೋಶಾಲೆಗೆ ಧಾವಿಸಿದ್ದು, ಆ ವೇಳೆಗೆ ಶಂಕಿತರು ಪರಾರಿಯಾಗಿದ್ದರು. ನಾಪತ್ತೆಯಾಗಿದ್ದ ಒಂದು ದನ ದೇವಸ್ಥಾನದ ಬಳಿ ಪತ್ತೆಯಾಗಿದೆ. ಕುಂದಾಪುರ ಡಿವೈಎಸ್‌ಪಿ, ಎಸ್‌ಐ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular