ಮಂಡ್ಯ: ಬೆಂಗಳೂರಿನ ಕಸಾಯಿಖಾನೆಗೆ ಆಕ್ರಮವಾಗಿ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಗೋವುಗಳನ್ನು ಪುನೀತ್ ಕೆರೆಹಳ್ಳಿ ತಂಡ ರಕ್ಷಣೆ ಮಾಡಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ಐಬಿ ಸರ್ಕಲ್ ಬಳಿ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ನಂತರ ಪುನೀತ್ ಕೆರೆಹಳ್ಳಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ದೂರಿನನ್ವಯ ಜಾನುವಾರು ಸಾಗಿಸುತ್ತಿದ್ದ ವಾಹನದ ಚಾಲಕ ಮನ್ಸೂರು ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.