Tuesday, May 13, 2025
Homeಮಂಗಳೂರುಬಂಗ್ರಕೂಳೂರು: ರಸ್ತೆಯಲ್ಲಿ ಬಿರುಕು; ಕುಸಿತದ ಭೀತಿ; ಸ್ಥಳೀಯರಿಗೆ ಸಂಪರ್ಕ ಕಡಿತದ ಆತಂಕ

ಬಂಗ್ರಕೂಳೂರು: ರಸ್ತೆಯಲ್ಲಿ ಬಿರುಕು; ಕುಸಿತದ ಭೀತಿ; ಸ್ಥಳೀಯರಿಗೆ ಸಂಪರ್ಕ ಕಡಿತದ ಆತಂಕ

ಬಂಗ್ರಕೂಳೂರು: ರಸ್ತೆಯಲ್ಲಿ ಬಿರುಕು; ಕುಸಿತದ ಭೀತಿ; ಸ್ಥಳೀಯರಿಗೆ ಸಂಪರ್ಕ ಕಡಿತದ ಆತಂಕ
ಮಂಗಳೂರು: ಬಂಗ್ರಕೂಳೂರು ರಸ್ತೆಯಲ್ಲಿ ಮಳೆ ನೀರು ಹರಿಯುವ ತೋಡಿನ ಪಕ್ಕದಲ್ಲಿನ ರಸ್ತೆಯೊಂದು ಸುಮಾರು 50 ಮೀಟರ್‌ ಉದ್ದಕ್ಕೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ರಸ್ತೆ ಬಿರುಕುಬಿಟ್ಟಿರುವ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆ ಕುಸಿಯುವ ಭೀತಿ ಎದುರಿಸುತ್ತಿದೆ.
ಸ್ಥಳೀಯ ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಪಕ್ಕದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲಾಗಿದೆ. ಹಲವು ಮನೆಗಳಿಗೆ ಸಂಪರ್ಕ ಸಾಧಿಸುವ ಈ ರಸ್ತೆ ಕುಸಿದರೆ ಈ ಮನೆಗಳಿಗೆ ತೆರಳುವುದು ಕಷ್ಟ ಸಾಧ್ಯವೆನ್ನಲಾಗಿದೆ. ಹೀಗಾಗಿ ರಸ್ತೆ ಸಂಪರ್ಕ ಇಲ್ಲದಂತಾಗುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular