ಮಂಗಳೂರು: ಏಷ್ಯಾದ ಅತ್ಯಂತ ದೊಡ್ಡ ಗೃಹ ಎಲಿವೇಟರ್‌ಗಳ ಬ್ರಾಂಡ್ ಆದ ನಿಬವ್ ಹೋಮ್ ಲಿಫ್ಟ್ ಈಗ ತನ್ನ 5ನೇ ಅತ್ಯಂತ ದೊಡ್ಡ ಉತ್ಪಾದನಾ ಸೌಲಭ್ಯವನ್ನು ಚೆನೈನಲ್ಲಿ ಉದ್ಘಾಟಿಸಿದೆ. ವಾರ್ಷಿಕ 7500 ಘಟಕಗಳನ್ನು ಉತ್ಪಾದಿಸುವ ಈ ಸೌಲಭ್ಯದೊಂದಿಗೆ ಸಂಸ್ಥೆಯ ಎಲ್ಲಾ ಘಟಕಗಳಿಂದ ಒಟ್ಟಾರೆ 15,000 ಲಿಫ್ಟ್ಗಳಿಗೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. ಸಿಪ್‌ಕಾಟ್ ಇರಂಗಟುಕೊಟೈನಲ್ಲಿ ಆರಂಭಿಸಲಾಗಿರುವ ಈ ಅತ್ಯಾಧುನಿಕ ಸೌಲಭ್ಯ 1,00,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಸಂಸ್ಥೆಯ ಇತ್ತೀಚಿನ ಗೃಹ ಎಲಿವೇಟರ್‌ಗಳ ಶ್ರೇಣಿ ನಿಬವ್ ಸೀರೀಸ್‌ಗಳನ್ನು ಉತ್ಪಾದಿಸಲಿದೆ.
ಸಂಸ್ಥೆಯು ಈ ಪ್ರದೇಶದಲ್ಲಿ450 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಉನ್ನತ ದಕ್ಷತೆಯ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸೌಲಭ್ಯದೊಂದಿಗೆ ಹೆಚ್ಚಿನ ಉತ್ಪಾದನೆಯಾಗುವುದಲ್ಲದೆ, ಸಂಪನ್ಮೂಲಗಳು ವ್ಯರ್ಥವಾಗುವುದು ಕಡಿಮೆಯಾಗಲಿದೆ. ಈ ಕಾರ್ಖಾನೆಯಲ್ಲಿ ಅತ್ಯಾಧುನಿಕ ಲೇಸರ್‌ಕಟ್ ಮಿಷಿನ್‌ಗಳು, ಸಿಎನ್‌ಸಿ ಯಂತ್ರಗಳು, ಪೌಡರ್ ಕೋಟಿಂಗ್ ಘಟಕ, ರೊಬೊಟಿಕ್ ಯಂತ್ರಗಳು ಮತ್ತು ಟೆಸ್ಟ್ ಟವರ್ ಮುಂತಾದ ಉನ್ನತ ವೈಶಿಷ್ಟ್ಯ ಗಳಿರುತ್ತವೆ. ನವೀನತೆ ಮತ್ತು ಗುಣಮಟ್ಟದ ಮೇಲೆ ಸೂಕ್ಷ್ಮ ಗಮನ ಇಟ್ಟುಕೊಂಡಿರುವ ನಿಬವ್ ಹೋಮ್ ಲಿಫ್ಟ್ ನೂತನ ಸೌಲಭ್ಯದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಬಾಬು ತಿಳಿಸಿದರು.