ಬಹರೈನ್ ದ್ವೀಪ ರಾಷ್ಟ್ರದ ವೈ ಎಂ ಎಸ್ ಸಂಘಟನೆಯು ನಿಸರ್ಗ ಬಹ್ರೈನ್ ತಂಡದ ಆಶ್ರಯದಲ್ಲಿ ಇಲ್ಲಿನ ಜುಫೈರ್ ಪರಿಸರದಲ್ಲಿರುವ ಹೆಚ್ ಪಿ ಸಿ ಎ ಅಲ್ ನಜ್ಮಾ ಕ್ರೀಡಾಂಗಣ ದಲ್ಲಿ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು ಆಟಗಾರರು, ಸಾವಿರಾರು ಕ್ರಿಕೆಟ್ ಪ್ರೇಮಿಗಳು, ಈ ಪಂದ್ಯಾಟವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪಂದ್ಯಾಟವು ಡಿಸಂಬರ್ 5 ರಂದು ರಾತ್ರಿ ವಿದ್ಯುಕ್ತ ಚಾಲನೆ ಕಂಡು ಡಿಸೆಂಬರ್ 6 ರಂದು ತಡರಾತ್ರಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.
30 ಗಜಗಳ ಮೃದು ಚೆಂಡಿನ ಹರಾಜು ಪ್ರಕ್ರಿಯೆಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ದ್ವೀಪದ ಭಾರತೀಯ ಮೂಲದ ಪುರುಷರ 12 ತಂಡಗಳು ಹಾಗೂ ಮಹಿಳೆಯರ 6 ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.
ಮನೋಜ್ ಶೆಟ್ಟಿ ಶಿರ್ವ, ಸಂಪತ್ ಶೆಟ್ಟಿ ಸುರತ್ಕಲ್, ಯಜ್ಞೇಶ್ ಪೂಜಾರಿ ಸಸಿಹಿತ್ಲು, ಧನುಷ್ ಕುಲಾಲ್ ಸೂರಿಂಜೆ, ರೂಪೇಶ್ ಸಾಲಿಯಾನ್ ನಿಟ್ಟೆ,ಈ ಪಂದ್ಯಾಟವನ್ನು ಅತ್ಯಂತ ಅಚುಕಟ್ಟಾಗಿ ಆಯೋಜಿಸಿದ್ದರು.
ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ತಾಯ್ನಾಡಿನಿಂದ ಆಗಮಿಸಿದ ಅಂತರಾಷ್ಟ್ರೀಯ ಅಗ್ನಿಶಾಮಕ ದಳದ ಕ್ರೀಡಾಕೂಟ ಡೆನ್ಮಾರ್ಕ್ 2024 ರಲ್ಲಿ ಗೋಲ್ಡ್ ಮೆಡಲ್ ಪಡೆದ ಶ್ರೀಯುತ ಅಶ್ವಿನ್ ಸನಿಲ್ ಅವರು ಭಾಗವಹಿಸಿ ಕ್ರೀಡಾಕೂಟದ ಮೆರುಗನ್ನು ಹೆಚ್ಚಿಸಿದರು. ಗೌರವ ಅತಿಥಿಗಳಾಗಿ ಬಂಟ್ಸ್ ಕತಾರ್ ನ ಅಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ ಇರುವೈಲ್ ಹಾಗೂ ಕತಾರ್ ಬಿಲ್ಲವಾಸ್ ನ ಅಧ್ಯಕ್ಷರಾದ ಶ್ರೀ ಸಂದೀಪ್ ಸಾಲಿಯಾನ್ ಅವರು ಬಾಗವಹಿಸಿದ್ದರು.
ತಡರಾತ್ರಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಯಕ್ಷ ಪಟ್ಲ ಫೌಂಡೇಶನ್ ಬಹರೈನ್ ಸೌದಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನರೇಂದ್ರ ಶೆಟ್ಟಿ ,ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷರಾದ ಶ್ರೀ ಹರೀಶ್ ಪಾಲನ್, ಬಂಟ್ಸ್ ಬಹರೈನ್ ಅಧ್ಯಕ್ಷರಾದ ಶ್ರೀ ನಿತಿನ್ ಶೆಟ್ಟಿ, ಕರ್ನಾಟಕ ಸೋಶಿಯಲ್ ಕ್ಲಬ್ ಬಹ್ರೈನ್ ನ ಅಧ್ಯಕ್ಷರಾದ ಶ್ರೀ ಆನಂದ್ ಲೋಬೋ, ಮೊಗರ್ವೀರ್ಸ್ ಬಹರೈನ್ ನ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಶಮಿತ್ ಕುಂದರ್, ಬಹರೈನ್ ಬಿಲ್ಲವಾಸ್ ನ ಮಾಜಿ ಅಧ್ಯಕ್ಷರಾದ ಶ್ರೀ ಅಜಿತ್ ಬಂಗೇರ, ಬಹರೈನ್ ಕುಲಾಲ್ಸ್ ನ ಅಧ್ಯಕ್ಷರಾದ ಶ್ರೀ ಗುರು ಪ್ರಸಾದ್ ಯಕ್ಕಾರ್, ಇರಾನ್ ಗ್ರೂಪ್ ಆಫ್ ಕಂಪನಿಯ ಫೈನಾನ್ಸ್ ಮ್ಯಾನೇಜರ್ ಶ್ರೀ ನವೀನ್ ಭಂಡಾರಿ, ಶ್ರೀ ವಿಶ್ವಕರ್ಮ ಸೇವಾ ಬಳಗ ಬಹರೈನ್ ನ ಅಧ್ಯಕ್ಷರಾದ ಶ್ರೀ ಸತೀಶ್ ಆಚಾರ್ಯ, ಹೆಚ್ ಪಿ ಸಿ ಎ ಅಕಾಡೆಮಿ ನಿರ್ದೇಶಕರಾದ ಶ್ರೀ ಜಯರಾಜ್ ಭಂಡಾರಿ, ಬಂಟ್ಸ್ ಬಹರೈನ್ ನ ಮಾಜಿ ಅಧ್ಯಕ್ಷರಾದ ಶ್ರೀ ನಾಗೇಶ್ ಶೆಟ್ಟಿ, ಬಹರೈನ್ ಕುಲಾಲ್ಸ್ ನ ಮಾಜಿ ಅಧ್ಯಕ್ಷರಾದ ಶ್ರೀ ಗಣೇಶ್ ಮನಿಲ, ರೇಡಿಯೊ ನಿರೂಪಕರಾದ ಶ್ರೀ ಕಮಲಾಕ್ಷ ಅಮೀನ್, ಅಸ್ಕರ್ ಆಟೋ ಸರ್ವಿಸ್ ನ ನಿರ್ದೇಶಕರಾದ ಶ್ರೀ ರಾಜ್ ಬೆದ್ರ,ಕನ್ನಡ ಸಂಘ ಬಹರೈನ್ ನ ಕ್ರೀಡಾ ಕಾರ್ಯದರ್ಶಿ ಜಾನ್ ದೀಪಕ್ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವೀಕ್ಷಿಸಿ ಕೊಂಡಾಡಿದರು.
ಈ ಸಂದರ್ಭದಲ್ಲಿ ತಾಯ್ನಾಡಿನಿಂದ ಆಗಮಿಸಿದ ಮುಖ್ಯ ಅತಿಥಿಯಾದ ಅಂತರಾಷ್ಟ್ರೀಯ ಗೋಲ್ಡ್ ಮೆಡಲ್ ವಿಜೇತರಾದ ಶ್ರೀ ಅಶ್ವಿನ್ ಸನಿಲ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಬಂಟ್ಸ್ ಕತಾರ್ ನ ಅಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ ಹಾಗೂ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್ ಸಾಲಿಯಾನ್ ಅವರನ್ನು ಕೂಡ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಎಲ್ಲಾ ವಿಜೇತ ತಂಡಗಳಿಗೆ ವೈ ಎಂ ಎಸ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಯಿತು.
ಈ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಶ್ರೀ ಪ್ರೀತಮ್ ಅಚಾರ್ಯ ನೇತೃತ್ವದ ಶೈನಿಂಗ್ ಸ್ಟಾರ್ ನೃತ್ಯ ತಂಡದ ಸುಮಾರು 70 ಕ್ಕೂ ಹೆಚ್ಚು ಮಕ್ಕಳಿಂದ ವೈವಿಧ್ಯಮಯ ನೃತ್ಯ ಹಾಗೂ ಡಿಜೆ ಶ್ರೀ ಧನುಷ್ ಅವರಿಂದ ಲಯಬದ್ಧವಾದ ಡಿಜೆ ಸಂಯೋಜನೆ, ಪ್ರದರ್ಶನಗೊಂಡು ನೆರೆದ ಕ್ರೀಡಾಪ್ರೇಮಿಗಳ ಮನಸೂರೆಗೊಂಡಿತು. ಜೊತೆಗೆ ಬಹರೈನ್ ದ್ವೀಪ ರಾಷ್ಟ್ರದ 53 ನೇ ರಾಷ್ಟ್ರೀಯ ದಿನವನ್ನು ಪೂರ್ವಭಾವಿಯಾಗಿ ಸಂಭ್ರಮಿಸಲಾಯಿತು.
ಈ ಪಂದ್ಯಾಟದ ತೀರ್ಪುಗಾರರಾಗಿ ಶ್ರೀ ಸುರೇಂದ್ರ ಭಂಡಾರಿ, ಶ್ರೀ ಕಮಲ್, ಶ್ರೀ ಮುಬಾರಕ್ ಸಹಕರಿಸಿದರು. ವೀಕ್ಷಕ ವಿವರಣೆಗಾರರಾಗಿ ಶ್ರೀ ಮನ್ಸೂರ್ ಸೌದಿ ಅರಬಿಯ, ಶ್ರೀಮತಿ ಫ್ರೀಡಾ ಸಿಕ್ವೇರಾ ಶ್ರೀ ಜಾಯ್ ಅವರುಗಳು ಸಹಕರಿಸಿದರು.
ವಸಂತ್ ಸಾಲಿಯಾನ್ ಮಲ್ಪೆ ಪ್ರಶಾಂತ್ ಬಂಗೇರ ಕತಾರ್ , ಶರಣ್ ಬಂಟಕಲ್, ರತೀಶ್ ಭಂಡಾರಿ, ದೀಕ್ಷಿತ್ ಸಾಲಿಯಾನ್, ಶಶಿಧರ್ ಕುಲಾಲ್ ಕೈರಂಗಳ, ಅನೀಶ್, ಯತೀಶ್ ಪೂಜಾರಿ, ಶರತ್ ಶೆಟ್ಟಿ, ಧನರಾಜ್ ಶೆಟ್ಟಿ, ನವೀನ್ ಕುಮಾರ್, ಭರತ್ ನಾಯಕ್, ಪ್ರವೀಣ್, ನಿತ್ಯ ನಾಯಕ್, ಕಾರ್ತಿಕ್ ಶೆಟ್ಟಿ, ಕೌಶಿಕ್ ಶೆಟ್ಟಿ , ವಿವಿನ್ಜಿತ್ ಡಿಸೋಜಾ, ಸುನೀಲ್ ಉಪ್ಪೂರ್, ಬಪ್ಪಿ, ನಿಶಾಂತ್ ಮುಂತಾದವರು ಉಪಸ್ಥಿತರಿದ್ದು ಪಂದ್ಯಾಟವು ಯಶಸ್ವಿಯಾಗಿ ಜರುಗುವಲ್ಲಿ ಸಹಕರಿಸಿದರು.
ಶ್ರೀ ರೂಪೇಶ್ ಸಾಲಿಯಾನ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಳೆದ 3 ವರುಷಗಳಿಂದ ಈ ಕ್ರಿಕೆಟ್ ಪಂದ್ಯಾಟವನ್ನು ದ್ವೀಪ ರಾಷ್ಟ್ರದಲ್ಲಿ ಆಯೋಜಿಸುತ್ತ ಬಂದಿರುವ ವೈ ಎಂ ಎಸ್ ನಿಸರ್ಗ ತಂಡವು ದ್ವೀಪ ರಾಷ್ಟ್ರದ ಕ್ರಿಕೆಟ್ ಆಟಗಾರರಿಗೆ ಉತ್ತಮ ವೇದಿಕೆ ಒದಗಿಸುವುದರ ಜೊತೆಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಕೂಡ ಮಾಡುತ್ತಿದೆ.
ವಿಜೇತರು
ಪುರುಷರ ವಿಭಾಗದಲ್ಲಿ ಪ್ರವೀಣ್ ಪಿರೇರಾ ಮಾಲಕತ್ವದ ಸೆವೆನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಮೂಡಿಬಂದು ಕರಾವಳಿ ಗೆಳೆಯರ ಮಾಲಕತ್ವದ ಕರಾವಳಿ ಫೈಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ, ನವೀನ್ ಶೆಟ್ಟಿ ಮಾಲಕತ್ವದ ಸಾಚಿ ತಂಡ ತೃತೀಯ ಸ್ಥಾನ, ದಿನೇಶ್ ಪೂಜಾರಿ ಮಾಲಕತ್ವದ ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಫೈಜಲ್ ಗಂಗೊಳ್ಳಿ ಸರಣಿಶ್ರೇಷ್ಠ , ಫೈನಲ್ ಪಂದ್ಯ ಶ್ರೇಷ್ಠ, ಅತ್ಯುತ್ತಮ ದಾಂಡಿಗ ಪ್ರಶಸ್ತಿ , ಕಿಶನ್ ಶೆಟ್ಟಿ ಅತ್ಯುತ್ತಮ ಎಸೆತಗಾರ ಪ್ರಶಸ್ತಿ, ಸಂದೇಶ್ ಅತ್ಯುತ್ತಮ ಗೂಟರಕ್ಷಕ ಪ್ರಶಸ್ತಿ, ಗುರುಪ್ರಸಾದ್ ಶೆಟ್ಟಿ ಅತ್ಯುತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ ತನ್ನದಾಗಿಸಿಕೊಂಡರು.
ವನಿತೆಯರ ವಿಭಾಗದಲ್ಲಿ ದಿನೇಶ್ ಪೂಜಾರಿ ಹಾಗೂ ರಂಜಿತ್ ಮಾಲಕತ್ವದ ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ತಂಡ ಚಾಂಪಿಯನ್ ಆಗಿ ಮೂಡಿಬಂದು ರಶ್ಮಿ ಸಂಪತ್ ಶೆಟ್ಟಿ ಮಾಲಕತ್ವದ ಎಸ್ ರ್ sports ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಾರಾ ವಿವೇಕ್ ಸರಣಿಶ್ರೇಷ್ಠ, ಅತ್ಯುತ್ತಮ ದಾಂಡಿಗಿತ್ತಿ, ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಸಿಲ್ವಿಯಾ ದಾಂತಿಸ್ ಅತ್ಯುತ್ತಮ ಎಸೆತಗಾರ್ತಿ ಪ್ರಶಸ್ತಿ, ಮಮತಾ ಅಗರ್ಬೈಲ್ ಅತ್ಯುತ್ತಮ ಕ್ಷೇತ್ರರಕ್ಷಕಿ ಪ್ರಶಸ್ತಿ ತನ್ನದಾಗಿಸಿಕೊಂಡರು.