Wednesday, September 11, 2024
Homeರಾಷ್ಟ್ರೀಯಜನನಿಭಿಡ ಬೀದಿಯಲ್ಲಿ ಓಡಾಡಿದ ಮೊಸಳೆ | ಸಾರ್ವಜನಿಕರಲ್ಲಿ ಭೀತಿ

ಜನನಿಭಿಡ ಬೀದಿಯಲ್ಲಿ ಓಡಾಡಿದ ಮೊಸಳೆ | ಸಾರ್ವಜನಿಕರಲ್ಲಿ ಭೀತಿ

ಲಕ್ನೊ: ಹಾಡಹಗಲೇ ಸಾರ್ವಜನಿಕ ರಸ್ತೆಯೊಂದರಲ್ಲಿ ಮೊಸಳೆಯೊಂದು ಓಡಾಡಿದ ವಿಡಿಯೋ ವೈರಲ್‌ ಆಗಿದೆ. ಭಾರೀ ಗಾತ್ರದ ಮೊಸಳೆ ಕಂಡು ಸ್ಥಳೀಯರು ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.
ಜನರು ಓಡಾಟ ನಡೆಸುವ ಬೀದಿಯಲ್ಲೇ ಮೊಸಳೆ ಓಡಾಡಿದೆ. ಮೊಸಳೆ ಕಂಡ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಬರುವವರೆಗೆ ಮೊಸಳೆ ಎಲ್ಲೆಂದರಲ್ಲಿ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಕೆಲವು ಗಂಟೆಗಳ ನಂತರ ಬಂದ ಅರಣ್ಯಾಧಿಕಾಧಿಕಾರಿಗಳು ಮೊಸಳೆಯನ್ನು ಹಿಡಿದು ಸುರಕ್ಷಿತ ತಾಣಕ್ಕೆ ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular