Saturday, July 20, 2024
Homeರಾಜ್ಯಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆಯಿಂದ ಭೀಕರ ವಿಕೃತ ಕ್ರೌರ್ಯ: ಮಗು ಆಸ್ಪತ್ರೆಗೆ ದಾಖಲು

ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆಯಿಂದ ಭೀಕರ ವಿಕೃತ ಕ್ರೌರ್ಯ: ಮಗು ಆಸ್ಪತ್ರೆಗೆ ದಾಖಲು

ಗೌರಿಬಿದನೂರು: ಮಲತಂದೆಯೊಬ್ಬ ಮಗುವೊಂದರ ಮೇಲೆ ವಿಕೃತ ಕ್ರೌರ್ಯ ಮೆರೆದ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಮಲತಂದೆ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬಳ ಮೂರನೇ ಗಂಡನ ವಿಕೃತಿ ಅದ್ಯಾವ ಪರಿ ಇದೆ ಎಂದರೆ ಮಗುವಿನ ಗುಪ್ತಾಂಗ ಕಚ್ಚಿ, ಸಿಗರೇಟ್‌ನಿಂದ ಸುಟ್ಟು ಮೃಗೀಯ ರೀತಿ ವರ್ತಿಸಿರುವುದಾಗಿ ವರದಿಯಾಗಿದೆ.
ಜರೀನಾ ತಾಜ್‌ ಎಂಬಾಕೆಗೆ ಮೂರು ಮದುವೆಯಾಗಿದೆ. ಅದರಲ್ಲಿ ಎರಡನೇ ಗಂಡನ ಮಗುವಿಗೆ ಮೂರನೇ ಗಂಡ ಅಜ್ಮಂತ್‌ ಎಂಬಾತ ಚಿತ್ರಹಿಂಸೆ ನೀಡಿದ್ದಾನೆ. ಆರೋಪಿಯು ಮಗುವಿಗಷ್ಟೇ ಅಲ್ಲದ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಮೂರು ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ. 15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ಆಕೆಯ ಮೇಲೂ ಅಮಾನವೀಯ ದೌರ್ಜನ್ಯ ಎಸಗಿದ್ದಾನೆ.
ಗಂಭೀರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್‌ಗೊಳಗಾಗಿದ್ದಾಳೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular