Sunday, January 19, 2025
HomeUncategorizedಸೌತೆಕಾಯಿ ವಿಷಯಕ್ಕೆ ಬಿತ್ತು ಹೆಣ : ಅಣ್ಣನಿಂದ ತಂಗಿಯ ಬರ್ಬರ ಹತ್ಯೆ..!

ಸೌತೆಕಾಯಿ ವಿಷಯಕ್ಕೆ ಬಿತ್ತು ಹೆಣ : ಅಣ್ಣನಿಂದ ತಂಗಿಯ ಬರ್ಬರ ಹತ್ಯೆ..!


ಕೇವಲ ಸೌತೆಕಾಯಿಗಾಗಿ ನರಹಂತಕ ಅಣ್ಣನೊಬ್ಬ ತನ್ನ ತಂಗಿಯ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲ ಎಂಬಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಐಮನ್ ಬಾನು ಎಂದು ತಿಳಿದುಬಂದಿದ್ದು, ಇನ್ನೂ ಆಕೆಯನ್ನು ಹತ್ಯೆಗೈದ ಹಂತಕ ಅಣ್ಣನನ್ನು ಫರ್ಮಾನ್ ಪಾಷಾ ಎಂದು ತಿಳಿದುಬಂದಿದೆ.ಸೌತೆಕಾಯಿ ಗಾಗಿ ಅಣ್ಣನೊಬ್ಬ ಭೀಕರವಾಗಿ ಕತ್ತಿಯಿಂದ ತಂಗಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಈದ್ಗ ಮೊಹಲ್ಲಾದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.

ನಿನ್ನೆ ರಾತ್ರಿ ಅಣ್ಣನ ಮಗನಿಗೆ ಕೊಲೆ ಆರೋಪಿ ಫರ್ಮಾನ್ ಪಾಷಾ ಸೌತೆಕಾಯಿ ತಿನಿಸುತ್ತಿದ್ದ. ಮಗನಿಗೆ ಜ್ವರ ಇದೆ ತಿನ್ನಿಸಬೇಡ ಎಂದು ಆತನ ಅತ್ತಿಗೆ ಹೇಳಿದ್ದಾಳೆ. ಇದೆ ವಿಚಾರವಾಗಿ ಅಣ್ಣ ಫರ್ಮಾನ್ ಪಾಷಾಗೆ ತಂಗಿ ಐಮನ್ ಬಾನು ಬೈದಿದ್ದಾಳೆ.ಇದರಿಂದ ಕೋಪಗೊಂಡ ಫರ್ಮಾನ್ ಕತ್ತಿ ತೆಗೆದುಕೊಂಡು ತಂಗಿಯ ಕುತ್ತಿಗೆಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಇದನ್ನು ಬಿಡಿಸಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲು ಕೂಡ ಆತ ಹಲ್ಲೆ ನಡೆಸಿದ್ದಾನೆ.ಸದ್ಯ ಇಬ್ಬರೂ ಗಾಯಾಳುಗಳನ್ನು ಚಾಮರಾಜನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular