Monday, February 17, 2025
Homeದಾವಣಗೆರೆಜೀವನದ ಸಾರ್ಥಕತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸ್ಪೂರ್ತಿ- ಡಾ. ಜೈರಾಜ್ ಚಿಕ್ಕಪಾಟೀಲ್

ಜೀವನದ ಸಾರ್ಥಕತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸ್ಪೂರ್ತಿ- ಡಾ. ಜೈರಾಜ್ ಚಿಕ್ಕಪಾಟೀಲ್

ದಾವಣಗೆರೆ : ಮಾನವ ಕಖೇವಲ ಹೊಟ್ಟೆ ಪಾಡಿಗೆ ಸೀಮಿತವಾಗದೇ ನಮ್ಮ ನಿಮ್ಮೆಲ್ಲರ ಜೀವದ ಸಾರ್ಥಕತೆಗೆ ಕಲೆ, ಸಾಹಿತ್ಯ, ಸಂಗೀತ ಸಾಂಸ್ಕೃತಿಕ ಚಟುವಟಕೆಗಳು ಸ್ಪೂರ್ತಿದಾಯಕವಾಗಿರುತ್ತದೆ. ಈ ಕಲಾಕುಂಚ ಸಂಸ್ಥೆಯು ಕಳೆ ಮೂರವರೆ ದಶಕಗಳಿಂದ ನಿರಂತರವಾಗಿ ದಾವಣಗೆರೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು
ವೈಭವೀಕರಿಸುತ್ತಿರುವುದು ಶ್ಲಾಘನೀಯ. ಕೆಲವು ಸಂಘಟನೆಗಳು ಆರಂಭಶೂರತ್ವಕ್ಕೆ ಸೀಮಿತವಾಗಿರುತ್ತದೆ.
ಒಂದೆರಡು ವರ್ಷಗಳ ನಂತರ ಸ್ಥಗಿತವಾಗುತ್ತಿರುವುದು ಸರ್ವೇ ಸಾಮಾನ್ಯ ಎಂದು ದಾವಣಗೆರೆಯ ದೃಶ್ಯಕಲಾ
ವಿಶ್ವವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ್ ಚಿಕ್ಕಪಾಟೀಲ್ ತಮ್ಮ ಅನಿಸಿಕೆ ಹಂಚಿಕೊAಡರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾಕುಂಚ ಕಛೇರಿಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕವಿಗೋಷ್ಠಿ ಹಮ್ಮಿಕೊಂಡಿದ್ದು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿ, ಕವಯತ್ರಿಯರು ಕವನ ವಾಚನ ಮಾಡಿದರು.
ಯುವ ಕವಿ ದರ್ಶನ ಸಂಕೋಳ್‌ರವರ “ಭಾವನೆಗಳ ಸುಳಿಯಲ್ಲಿ” ಕವನ ಸಂಕಲನ ಲೋಕಾರ್ಪಣೆ ಮಾಡಿದ ಚಿತ್ರದುರ್ಗದ ಸಾಹಿತಿಗಳಾದ ಟ.ಪಿ.ಉಮೇಶ್‌ರವರು ಮಾತನಾಡಿ, ಹಳೆಗನ್ನಡ ಸಾಹಿತ್ಯ ಕವನ ರಚನೆಗಳು ಈಗಿನ ಅಂತಾರ್ಜಾಲ ತಾಣದ ಭರಾಟೆಯಲ್ಲಿ ಮೂಲೆಗುಂಪಾಗುತ್ತಿರುವುದು ವಿಷಾದದ ಸಂಗತಿ, ಯುವ ಕವಿ, ಕಯವತ್ರಿಯರಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಗಳನ್ನು ಸೂಕ್ತವಾದ ವೇದಿಕೆಗಳೊಂದಿಗೆ ಅನಾವರಣಗೊಳಿಸುತ್ತಿರುವ ಸಂಸ್ಥೆ ದಾವಣಗೆರೆಯ ಕಲಾಕುಂಚ, ಕೆಲವು ಸಂಘಟನೆಗಳು ಕೇವಲ
ಪ್ರಚಾರಕ್ಕೆ ಸೀಮಿತವಾಗುತ್ತಿರುವುದು ಸಹಜ. ಈ ಸಂಸ್ಥೆಯು ಯಾವುದೇ ಸ್ವಾರ್ಥ ಇಲ್ಲದೇ ಯಾವುದೇ ಸರ್ಕಾರದ
ಇಲಾಖೆಗಳ ಅನುದಾನ ಪಡೆಯದೇ ಸ್ವತಂತ್ರವಾಗಿ ನಡೆಸುತ್ತಿರುವ ಕಲಾಕುಂಚ ಇತರ ಸಂಘಟನೆಗಳಿಗೆ ಮಾದರಿ
ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೌಹಾರ್ದ ಪ್ರಕಾಶನದ ಪ್ರಕಾಶಕಿ ಹಿರಿಯ ಸಾಹಿತಿ ಎ.ಸಿ.ಶಶಿಕಲಾ ಶಂಕರಮೂರ್ತಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕೂಡು ಕುಟುಂಬ ಮರೆಯಾಗುತ್ತಿವುದು ವಿಷಾದನೀಯ. ಮಕ್ಕಳನ್ನು ಬಾಲ್ಯದಿಂದಲೇ ತಂದೆ-ತಾಯಿಗಳು ಮಕ್ಕಳ ಜೀವನದ ಮುಂದಿನ ಸಾಧನೆಗಳಿಗೆ ಕಠಿಣ ಪರಿಶ್ರಮದಿಂದ ಸಾಕಿದ ನಂತರ ಮಕ್ಕಳು ದೊಡ್ಡವರಾದ ಮೇಲೆ ಉದ್ಯೋಗಕ್ಕೆ ಅಷ್ಟೇ ಸೀಮಿತವಾಗಿ ಅಪ್ಪ- ಅಮ್ಮನನ್ನು ಅನಾಥಾಶ್ರಮಕ್ಕೆ ಸೇರಿಸುವುದು ನಕಾರಾತ್ಮಕ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸುವ ಈ ಕಲಾಕುಂಚ ಸಂಸ್ಥೆಯ ಸದುದ್ದೇಶಗಳು ನಾವು ನೀವೆಲ್ಲಾ ಅಳವಡಿಸಬೇಕಾಗಿದೆ ಎಂದರು.
ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಸಹಕಾರ, ಸಹಯೋಗದಿಂದ ಮುಂದುವರಿಯುವ ಈ ಸಂಸ್ಥೆಯು ಶತಮಾನಕ್ಕೆ ತಲುಪಲಿ ಎಂದರು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಯುವ ಕವಿ ದರ್ಶನ ಸಂಕೋಳ್ ಹಾಗೂ ಕಲಾಕುಂಚ ವಿವಿಧ ಬಡಾವಣೆಗಳ ಶಾಖೆಗಳ ಅಧ್ಯಕ್ಷರುಗಳಾದ ಶಾರದಮ್ಮ
ಶಿವನಪ್ಪ, ಪ್ರಭಾ ರವೀಂದ್ರ, ವಿ.ಕೃಷ್ಣಮೂರ್ತಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ
ಮುಕ್ತಾ ಶ್ರೀನಿವಾಸ್ ಪ್ರಭುರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಚಂದ್ರಶೇಖರ
ಅಡಿಗರವರು ಸ್ವಾಗತಿಸಿದರು, ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ನಿರೂಪಿಸಿದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ ಎಲ್ಲರಿಗೂ ಅಭಿನಂದನಾ ಪತ್ರ, ಕವನ ಸಂಕಲನ ವಿತರಿಸಿ ಗೌರವಿಸಲಾಯಿತು.
ಕೊನೆಯಲ್ಲಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು. ಇತ್ತೀಚಿಗೆ ಸ್ವರ್ಗಸ್ಥರಾದ ನಾಡಿನ ಖ್ಯಾತ ಹಿರಿಯ ಸಾಹಿತಿ, ಡಾ.ನಾ. ಡಿಸೋಜಾ ರವರಿಗೆ ಮೌನಾಚರಣೆಯೊಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

RELATED ARTICLES
- Advertisment -
Google search engine

Most Popular