ದಾವಣಗೆರೆ:ಒಂದು ಕುಟುಂಬದಲ್ಲಿ ಸರ್ವರನ್ನು ನಿಭಾಯಿಸುವ ಕಠಿಣ ಪರಿಶ್ರಮ ಮಹಿಳೆಯರದ್ದು, ಇಂದಿನ ಹೊಸ ತಂತ್ರಜ್ಞಾನದ ಆಧುನಿಕ ಪರಿಸರದಲ್ಲಿ ಕೂಡು ಕುಟುಂಬದ ಪಥನವಾಗುತ್ತಿರುವುದು ವಿಷಾದನೀಯ. ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಅನುಸರಿಸಿ ತಾಳ್ಮೆಯಿಂದ ವಿಶಾಲ ಸೇವಾಮನೋಭಾವದೊಂದಿಗೆ ಸಂಸಾರದಲ್ಲಿ ತೊಡಗಿಸಿಕೊಂಡಾಗ ಜೀವನಕ್ಕೆ ಸಾರ್ಥಕತೆ ಬರುತ್ತದೆ ನಾವುಗಳು ಕೇವಲ ಹೊಟ್ಟೆಪಾಡಿಗೆ ಸೀಮಿತವಾಗದೆ ಸಾಮಾಜಿಕ ಕಾಳಜಿಯ ಸೇವೆಯಯೇ ದೇವರ ಪೂಜೆ. ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಕಳೆದ ಮೂರುವರೆ ದಶಕಗಳಿಂದ ನಿರಂತರವಾದ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನಾಲ್ಕು ಗೋಡೆ ಮಧ್ಯದಲ್ಲಿರುವ ಮಹಿಳೆಯರಲ್ಲಿ ಉದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತ ಸೂಕ್ತ ವೇದಿಕೆ ಕಲ್ಪಿಸುವ ಕಲಾಕುಂಚದ ಸಾಧನೆ ಶ್ಲಾಘನೀಯ ಎಂದು ಧಾರವಾಡದ ಖುಷಿ ಸಂಸ್ಕೃತಿ ವಿದ್ಯಾಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ರೇಣುಕಾದೇವಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ “ದಾವಣಗೆರೆ ಗೃಹಿಣಿ ಸ್ಪರ್ಧೆ-೨೦೨೪” ಸಮಾರಂಭವನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು ಮಾತನಾಡಿದರು. ಇತ್ತೀಚಿಗೆ ಸ್ವರ್ಗಸ್ಥರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರಿಗೆ ಒಂದು ನಿಮಿಷ ಮೌನಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದ ಕೆ.ಬಿ. ಬಡಾವಣೆಯ ಕುವೆಂಪು ರಸ್ತೆಯಲ್ಲಿರುವ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಿನ್ನೆ ತಾನೇ ನಡೆದ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿಯವರು ಮಾತನಾಡಿ ಮಹಿಳೆಯರು ಕೇವಲ ಶೃಂಗಾರಕ್ಕೆ ಸೀಮಿತವಾಗದೆ ನಮ್ಮ ಸಂಪ್ರದಾಯ ಸಂಸ್ಕೃತಿಗಳನ್ನು ಉಳಿಸುವ ಬೆಳೆಸುವ ವಿಶಾಲವಾದ ಮನೋಭಾವನೆಯೊಂದಿಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆಯ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್‌ರಾದ ಡಿ.ಹೆಚ್.ನಿರ್ಮಲಾ, ಸಂಸ್ಥೆಯ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಎಂ.ಸಿ.ಸಿ. ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ ಮಾನಾಡಿ, ನಮ್ಮ ನಿಮ್ಮೆಲ್ಲರ ಆಧ್ಯಾತ್ಮ ಸೇರಿದಂತೆ ಸಾಮಾಜಿಕ ಕಾಳಜಿಯ ಕಠಿಣ ಪರಿಶ್ರಮದ ಸೇವೆಗಳಿಗೆ ಮುಂಚೂಣಿಗಳಲ್ಲಿ ಇರುವುದೇ ಸ್ತ್ರೀ ಸಮಾಜ ಎಂದರು.
ಶ್ರೀಮತಿ ಸಂಧ್ಯಾ ಶ್ರೀನಿವಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಪುಷ್ಪ ಮಂಜುನಾಥ್ ಸ್ವಾಗತಿಸಿದರು. ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತ ಕಲ್ಲೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿರು. ಡಿಸಿಎಂ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ ವಂದಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೀಲಾ ಸುಭಾಷ್, ಶೈಲಾ ವಿನೋದ್, ಶೈಲಾ ಶಿವಕುಮಾರ್, ಶಿಲ್ಪಾ ಉಮೇಶ್ ಉಂಟಾದವರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.