Tuesday, January 14, 2025
Homeಬಂಟ್ವಾಳಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕನ್ನಡ ಭವನ ಕೈಕುಂಜೆ ಬಿ.ಸಿ.ರೋಡ್ ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಘಟಕದ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನಡೆಯಿತು. ದೀಪಪ್ರಜ್ವಲನ ಮತ್ತು ವರ್ಣ ಚಿತ್ತಾರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡು, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ 14-12-2024 ರಂದು ನಡೆಯಿತು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷರಾಗಿರುವ ವಿಶ್ವನಾಥ್ ಬಂಟ್ವಾಳ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳದ ಅಧ್ಯಕ್ಷರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು,ತುಳು ಒಕ್ಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್, ಅಭಿಮತ ವಾಹಿನಿ ಮಂಗಳೂರಿನ ಮುಖ್ಯಸ್ಥರಾದ ಡಾ.ಮಮತಾ ಪಿ. ಶೆಟ್ಟಿ, ಶಂಭೂರು ಶಾಲೆಯ ಮುಖ್ಯಗುರುಗಳಾದ ಜಯರಾಮ ಪಡ್ರೆ, ತಾಲೂಕು ಕಛೇರಿ ಬಂಟ್ವಾಳದ ಗ್ರಾಮ ಆಡಳಿತ ಅಧಿಕಾರಿ ಶ್ರೀಕಲಾ ಬಿ ಕಾರಂತ್, ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಪ್ರಮೀಳಾ ಮಾಣೂರು ಉಪಸ್ಥಿತರಿದ್ದು ಸಾಹಿತ್ಯ ಬೆಳವಣಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು. ಮತ್ತು ವಿಜಯ್ ಕುಮಾರ್ ಜೈನ್ ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ರಾಜ್ಯಸದಸ್ಯರಾದ ಎಚ್. ಕೆ ನಯನಾಡು, ಅಧ್ಯಕ್ಷರಾದ ನಿರೀಕ್ಷಿತಾ,ಉಪಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಕಡೇಶಿವಾಲಯ, ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ವಿದ್ಯಾಶ್ರೀ ಅಡೂರು,ಮೂಡಬಿದಿರೆ ತಾಲೂಕಿನ ಕಾರ್ಯದರ್ಶಿಯಾದ ಸುಚಿತ್ರ ಉಪಸ್ಥಿತರಿದ್ದು ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಇದೆ ವೇದಿಕೆಯಲ್ಲಿ ಸಾಹಿತ್ಯ ಪ್ರಸ್ತುತಿ ನಡೆದಿದ್ದು ಇದರ ಅಧ್ಯಕ್ಷತೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಕ ರ್ನಾಟಕದ ರಾಜ್ಯ ಸದಸ್ಯರಾದ ಆಶಾ ಅಡೂರು ವಹಿಸಿದ್ದರು. ವಿದ್ಯಾಶ್ರೀ ಅಡೂರು ಪ್ರಾರ್ಥಿಸಿ, ವಿಜಯ್ ಕುಮಾರ್ ಜೈನ್ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿ, ವಿಂಧ್ಯಾ ಎಸ್ ರೈ ವಂದಿಸಿ ಶ್ರೀ ಶಶಿಧರ ಏಮಾಜೆ ಮತ್ತು ಬಬಿತ ಶೆಟ್ಟಿ ವಿಟ್ಲ ನಿರೂಪಿಸಿದರು. ಶಾಂತಿಮoತ್ರದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

RELATED ARTICLES
- Advertisment -
Google search engine

Most Popular