ಬಡವರ ಕಲ್ಯಾಣಕ್ಕೆ ಗ್ಯಾರಂಟಿ ಅನುಕೂಲ: ಮಾಜಿ ಸಚಿವ ರೈ
ಬಂಟ್ವಾಳ:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರವು ಹಲವು ಅಪ ಪ್ರಚಾರಗಳ ನಡುವೆಯೂ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸುವ ಮೂಲಕ ಬಡ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಕರಿಯಂಗಳ ಗ್ರಾಮ ಪಂಚಾಯಿತಿನಲ್ಲಿ ಮಂಗಳವಾರ ನಡೆದ ಅಮ್ಟಾಡಿ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಕಳ್ಳಿಗೆ, ತುಂಬೆ, ಪುದು, ಮೇರಮಜಲು ಗ್ರಾಮಗಳ ರ‍್ಹ ಫಲಾನುಭವಿಗಳಿಗೆ ನೋಂದಣಿ ಮತ್ತು ಮಾಹಿತಿ ಶಿಬಿರ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧಾ ಲೋಕೇಶ್, ಉಪಾಧ್ಯಕ್ಷ ರಾಜು ಕೊಟ್ಯಾನ್, ಮಾಜಿ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಇಬ್ರಾಹಿಂ ನವಾಜ್,ವೀಣಾ ಆಚರ‍್ಯ, ಪಿಡಿಒ ರಶ್ಮಿ, ವಸಂತಿ, ನಯನ ಮತ್ತಿತರರು ಇದ್ದರು.
ಕರಿಯಂಗಳ: ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಮಾಹಿತಿ
RELATED ARTICLES