ನೆಲ್ಲಿಕಾರು ಗ್ರಾಮ ಪಂಚಾಯತ್ ನ ಹಳೆ ಕಟ್ಟಡದಲ್ಲಿ ಜನವರಿ 28 ರಂದು ಮಹಿಳಾ ಗ್ರಾಮ ಸಭೆ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಮಹಿಳೆಯರಿಗೆ ಅತ್ಯುಪಯುಕ್ತ ಗ್ರಾಹಕ ಮಾಹಿತಿಯನ್ನು ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ನೀಡಿದರು. ವಸ್ತುಗಳನ್ನು ಕೊಳ್ಳುವ ಮೊದಲು ಅದರಲ್ಲಿರುವ ಮುಖ್ಯ ಅಂಶಗಳು ಪ್ರಧಾನವಾಗಿವೆ ಎಂದು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಮುನ್ನ ಯಾವ್ಯಾವ ಸಂಗತಿಗಳನ್ನು ಗಮನಿಸಬೇಕು ಎಂಬುದರ ಸಮಗ್ರ ಮಾಹಿತಿಯನ್ನು ನೀಡಿದರು. ಸರಕಾರದ ಹಲವಾರು ಯೋಜನೆಗಳ ಸದುಪಯೋಗವನ್ನು ಮಾಡಿ ಕೊಳ್ಳಲು ಕೇಳಿಕೊಂಡರು.