Monday, January 13, 2025
HomeUncategorizedಫೆಂಗಲ್ ಚಂಡಮಾರುತ ಹೊಡೆತ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಫೆಂಗಲ್ ಚಂಡಮಾರುತ ಹೊಡೆತ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಮಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇದರಿಂದ ಫೆಂಗಾಲ್​ ಜನರನ್ನು ಕಂಗಾಲ್ ಮಾಡಿದ್ದು, ಅಪಾರ ಪ್ರಮಾಣದ ನೀರಿನಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿದೆ. ಹೆದ್ದಾರಿ ಬದಿ ಗೇಲ್ ಗಾಸ್ ಕಂಪನಿ ಅಗೆದಿದ್ದ ಹೊಂಡದಲ್ಲಿ‌ ನೀರು ತುಂಬಿ ಕೂಳೂರು ಬಳಿ ಮಂಗಳೂರು ಟು ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಉಡಪಿಯಿಂದ ಮಂಗಳೂರಿಗೆ ಬರುವ ವಾಹನ ಸವಾರರು ಪರದಾಡುತ್ತಿದ್ದಾರೆ.

ಹೆದ್ದಾರಿ ಬದಿ ಗೇಲ್​​ಗಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಆ ಗುಂಡಿಯಲ್ಲೇ ಇದೀಗ ಮಳೆ ನೀಡು ಶೇಖರಣೆಗೊಂಡು ಹೆದ್ದಾರಿ ಕುಸಿದಿದೆ. ಬೈಕ್, ಕಾರು, ಲಾರಿಗಳು ಪಾಸ್ ಆಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

ಬೈಕ್, ಕಾರು, ಲಾರಿಗಳು ಪಾಸ್ ಆದ ತಕ್ಷಣ ಏಕಾಏಕಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಜಸ್ಟ್ ಮಿಸ್ ಆಗಿದ್ರು ವಾಹನಗಳು ಹೊಂಡದೊಳಗೆ ಇರುತ್ತಿದ್ದವು. ಇನ್ನು ರಸ್ತೆ ಕುಸಿತದ ಪಕ್ಕದಲ್ಲೇ ಭಾರೀ ವಾಹನಗಳು ಸಂಚಿರಿಸುತ್ತಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಇದೆ.

ಇನ್ನು ನಿರಂತರ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ‌ ಗ್ರಾಮದ ಪಿಲಿಕೂರು‌ ಎಂಬಲ್ಲಿ ಬೃಹತ್​ ತಡೆಗೋಡೆ ಕುಸಿದಿದೆ. ಯಾಸೀನ್ ಬೇಗ್ ಎಂಬವರ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದದೆ. ಅದೃಷ್ಟವಶಾತ್​ ಮನೆಯಲ್ಲಿದ್ದ ಕುಟುಂಬ ಬಚಾವ್ ಆಗಿದೆ.

ಮೊಯ್ದಿನ್ ಎಂಬವರ ಮನೆಯ ಪಕ್ಕ ಈ ತಡೆಗೋಡೆ ನಿರ್ಮಿಸಿದ್ದು, ಇದರ ಕೆಳ ಭಾಗದಲ್ಲಿ ಯಾಸೀನ್ ಬೇಗ್ ಅವರ ಮನೆ ಇದೆ. ಯಾಸೀನ್ ಬೇಗ್ ಹಾಗೂ ಅವರ 5 ಮಂದಿ ಕುಟುಂಬ ಸದಸ್ಯರು ಮನೆಯೊಳಗಿದ್ದ ವೇಳೆಯೇ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಬಿದ್ದ ರಭಸಕ್ಕೆ ಮನೆಯು ಸದ್ಯ ಅಪಾಯ ಸ್ಥಿತಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಯಾಸೀನ್ ಬೇಗ್ ಕುಟುಂಬ ಮನೆ ಖಾಲಿ ಮಾಡಿಕೊಂಡು ಸಂಬಂಧಿಕರ ನಿವಾಸಕ್ಕೆ ತೆರಳಿದ್ದಾರೆ.

RELATED ARTICLES
- Advertisment -
Google search engine

Most Popular