Monday, January 13, 2025
Homeಮಂಗಳೂರುಡಿ. 15: ಷೇರು ಮಾರುಕಟ್ಟೆ ಯ ಕುರಿತು ಉಚಿತ ಕಾರ್ಯಗಾರ

ಡಿ. 15: ಷೇರು ಮಾರುಕಟ್ಟೆ ಯ ಕುರಿತು ಉಚಿತ ಕಾರ್ಯಗಾರ

ಮಂಗಳೂರು: ಡಿಸೆಂಬರ್ 15 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಕದ್ರಿ ಮಲ್ಲಿಕಟ್ಟೆಯಲ್ಲಿರುವ “ವಿನ್ನರ್ಸ್ ವೆಂಚರ್” ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯಲ್ಲಿ ಉಚಿತ ಕಾರ್ಯಗಾರ ನಡೆಯಲಿದೆ. ಇದರೊಂದಿಗೆ ಉಚಿತ ಡಿ-ಮ್ಯಾಟ್ ಖಾತೆಯನ್ನು ಮಾಡಿಕೊಡಲಾಗುವುದು ಎಂದು ತರಬೇತಿದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣಕಾಸು ಭದ್ರತೆಯನ್ನು ಖಚಿತ ಪಡಿಸಿಕೊಳ್ಳಲು ಹೂಡಿಕೆಯ ಒಂದು ಉತ್ತಮ ಮಾರ್ಗವಾಗಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ.

ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ; ಬ್ಯಾಂಕ್ ಠೇವಣಿ, ಪೋಸ್ಟ್ ಆಫಿಸ್ ಠೇವಣಿ, ಆರ್.ಡಿ., ಪಿ.ಪಿ.ಎಫ್., ಮ್ಯೂಚುವಲ್ ಫಂಡ್ಸ್, ಚಿನ್ನ , ರಿಯಲ್ ಎಸ್ಟೇಟ್ ಮತ್ತು ಸ್ಟಾಕ್ ಮಾರುಕಟ್ಟೆ ಹೂಡಿಕೆಗಳು.

ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಅತಿ ಹೆಚ್ಚಿನ ಲಾಭ ಗಳಿಸಬಹುದು. ಸ್ಟಾಕ್ ಮಾರುಕಟ್ಟೆಯ ಲಾಭಗಳು ಯಾವ ಹೂಡಿಕೆಯ ಲಾಭಕ್ಕೂ ಸರಿಸಾಟಿಯಲ್ಲ. ಷೇರು ಮಾರುಕಟ್ಟೆಯ ಜ್ಞಾನವನ್ನು ಪಡೆದು, ಮೂಲಭೂತ ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ಮಾಡಿ ಸರಿಯಾದ ಸಮಯದಲ್ಲಿ ಒಳ್ಳೆಯ ಗುಣಮಟ್ಟದ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಿ ಲಾಭ ಗಳಿಸಬಹುದು. ಸರಿಯಾದ ಪ್ರವೇಶ ಮತ್ತು ನಿರ್ಗಮನ ಷೇರು ಮಾರುಕಟ್ಟೆಯ ಮೂಲಭೂತ ಅಂಶವಾಗಿದೆ.

ವಿನ್ನರ್ ವೆಂಚರ್ಸ್ ತರಬೇತಿ ಸಂಸ್ಥೆಯು ಟ್ರೇಡಿಂಗ್ ಮತ್ತು ಇನ್ವೆಸ್ಟಮೆಂಟ್ ತರಬೇತಿಯನ್ನು ಒದಗಿಸುತ್ತದೆ. ಪ್ರತೀ ತಿಂಗಳ ಮೂರನೇ ಭಾನುವಾರದಂದು ಉಚಿತ ಕಾರ್ಯಗಾರವನ್ನು ಏರ್ಪಡಿಸಿ, ಜನರಿಗೆ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ.

 ನಿಮ್ಮ ನಿಯಮಿತ ಕೆಲಸದೊಂದಿಗೆ ಹೆಚ್ಚುವರಿ ಆದಾಯವನ್ನು ಗಳಿಸಿ ಹಣಕಾಸಿನ ಭದ್ರತೆಯನ್ನು ಖಚಿತ ಪಡಿಸುವ ಮಾರ್ಗವನ್ನು ಹೇಳಿಕೊಡಲಾಗುವುದು.

RELATED ARTICLES
- Advertisment -
Google search engine

Most Popular