ಅಳದಂಗಡಿ: ನಮ ಮಾತೆರ್ಲ ಒಂಜೇ ಕಲಾ ತಂಡ ಅರುವ, ಅಳದಂಗಡಿ ಇದರ 18ನೇ ವಾರ್ಷಿಕೋತ್ಸವವು ಇಲ್ಲಿನ ಪಂಚಾಯತ್ ವಠಾರದಲ್ಲಿ ಡಿ. 19ರಂದು ಜರುಗಲಿದೆ.
ಅಂದು ರಾತ್ರಿ 8ರಿಂದ ಸಭಾ ಕಾಯಕ್ರಮ ಹಾಗೂ ಸಾಧಕರಿಗೆ ಗೌರವ ಅರ್ಪಣೆ ನಡೆಯಲಿದೆ. ಕಾರ್ಯಕ್ರಮವನ್ನು ಅಳಂಗಡಿ ಅರಮನೆಯ ಶಿವಪ್ರಸದ್ ಅಜಿಲರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಲದಂಗಡಿ ಶ್ರೀ ಕ್ಲಿನಿಕ್ ಎನ್.ಎಂ.ತುಳುಪುಳೆ ವಹಿಸಲಿದ್ದಾರೆ. ಅತಿಥಿಗಳಗಿ, ಗಂಗಾಧರ ಮಿತ್ತಮಾರು, ಸುಭಾಶ್ಚಂದ್ರ ರೈ, ಸುಂದರ ಹೆಗ್ಡೆ, ಸದಾನಂದ ಪುಜಾರಿ, ನಾಗಕುಮಾರ ಜೈನ್, ಸತೀಶ್ ಪುಜಾರಿ, ಹಿಲಾರಿ ಫೆರ್ನಾಂಡಿಸ್, ಅಬುಲ್ ಹಮೀದ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚಿದಾನಂದ ಪುಜಾರಿ ಎದ್ದಕ್ಕ ಶಿರ್ಲಾಲ್, ಪ್ರಕಾಶ್ ಶೆಟ್ಟಿ ನೊಚ್ಚ ಅಳದಂಗಡಿ, ಅಲೋಶಿಯಸ್ ಡಿಸೋಜ ದೈಲ ಅಲದಂಗಡಿ, ರಾಕೇಶ್ ಹೆಗ್ಡೆ ಬಳಂಜೆ, ಸುಂದರ ಶೆಟ್ಟಿ ಪರಾರಿ ಮನೆ ಸುಲ್ಕೇರಿ, ವಸಂತ ಬಿ.ಬಂಗೇರ ಶಾಂತಿಬೆಟ್ಟು ಗರ್ಡಾಡಿ, ಮಂಜುನಾಥ ಆಚಾರ್ಯ ಅಳದಂಗಡಿ, ಲಕ್ಷ್ಮೀ ನಾರಾಯಣ ಗೊಲ್ಲ ಅಳದಂಗಡಿ, ಕಡಬ ಶ್ರೀನಿವಾಸ ರೈ, ಜಯಾನಂದ ಸಂಪಜೆ, ದಿನೇಶ್ ಶೆಟ್ಟಿಗಾರ್ ಕೊಡಪದವು ಅವರು ಗೌರವ ಸ್ವೀಕರಿಸಲಿದ್ದಾರೆ. ಬಳಿಕ ನಮ ಮಾತೆರ್ಲ ಒಂಜೇ ಕಲಾ ತಂಡ ಅರುವ, ಅಳದಂಗಡಿ ಇವರ ಸಾರಥ್ಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಶಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ʻಬಂಟನ ಬಲಿ ಸುತ್ತುʼ ಎಂಬ ಯಕ್ಷಗಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.