26.6 C
Udupi
Tuesday, November 29, 2022
spot_img

ಡಿ. 1ರಿಂದ 7ರವರೆ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಹರಿಕಥಾ ಸತ್ಸಂಗ ಸಪ್ತಾಹ

ಬಂಟ್ವಾಳ: ಶ್ರೀ ದತ್ತ ಜಯಂತಿ ಮಹೋತ್ಸವ , ಶ್ರೀ ದತ್ತ ಮಹಾಯಾಗ ಸಪ್ತಾಹ, ಹರಿಕಥಾ ಸತ್ಸಂಗ ಸಪ್ತಾಹವು ಡಿಸೆಂಬರ್‌ 1 ರಿಂದ 7 ರವರೆಗೆ ಒಡಿಯೂರು ಶ್ರೀ ಗುರುದೇವ ಸಂಸ್ಥಾನಮ್‌ನ ಶ್ರೀ ದತ್ತಾಂಜನೆಯ ಕ್ಷೇತ್ರ ದಕ್ಷಿಣ ಗಾಣಗಪುರದಲ್ಲಿ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯಮಾರ್ಗದರ್ಶನ ಹಾಗೂ ವೇ। ಮೂ। ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ ಶ್ರೀದತ್ತ ಮಹಾಯಾಗ ಸಪ್ತಾಹ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿರುವುದು. ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ತುಳು ನಾಟಕೋತ್ಸವವು ಜರುಗಲಿದೆ.


ಶ್ರೀ ದತ್ತ ಮಹಾಯಾಗದ ಮಹತ್ವ
ನಮಸ್ತೇ ಯೋಗಿರಾಜೇಂದ್ರ ದತ್ತಾತ್ರೇಯ ದಯಾನಿಧೇ |
ಸ್ಮೃತಿಂ ತೇ ದೇಹಿಮಾಂ ರಕ್ಷ ಭಕ್ತಿಂ ತೇ ದೇಹಿಮೇ ದೃಢಾಮ್ ॥
ತ್ರಿಮೂರ್ತಿ ಸ್ವರೂಪನಾದ ಭಗವಾನ್ ಶ್ರೀ ದತ್ತಾತ್ರೇಯ ಪ್ರಭುವಿನ ಅವತಾರ ಲೀಲೆಯೇ ಅನುಪಮವಾದುದು, ಜ್ಞಾನ ಪ್ರದಾತನೂ, ಸರ್ವಸೌಖ್ಯ ಕಾರಣನೂ ಆದ ದತ್ತ ಮೂರ್ತಿಯು ಸರ್ವರೋಗ ನಿವಾರಕನು. ದತ್ತಯಜ್ಞವು ಗುರುದೇವನ ಪ್ರಸನ್ನತೆಗೆ ಕಾರಣವು. ದತ್ತ ಯಾಗದಲ್ಲಿ ಭಾಗವಹಿಸುವುದರಿಂದ ಸಂತಾನ ಪ್ರಾಪ್ತಿ, ಚರ್ಮರೋಗಾದಿಗಳ ನಿವಾರಣೆ, ಸರ್ವಾಭೀಷ್ಟ ಸಿದ್ಧಿಫಲಗಳಿರುವುವೆಂದು ವಿದ್ವಜ್ಜನರ ಮತವಾಗಿದೆ.

ಗುರುಭಜಕರ ಅವಗಾಹನೆಗೆ : ಶ್ರೀ ಗುರುದತ್ತಾತ್ರೇಯರ ಅವತಾರ ವಿಶೇಷ, ಸಮರಸ ತತ್ತ್ವವನ್ನು ಜಗತ್ತಿಗೆ ಸಾರಿ, ವಿಶ್ವ ಮಾನವ ಧರ್ಮದ ಅರಿವು ಮೂಡಿಸುವುದೇ ಆಗಿದೆ. ಇಂತಹ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಿದ್ಧರಿರುವ ಗುರುಭಜಕರಿಗೆ ‘ಮಾಲಾಧಾರಣೆ’ ಮತ್ತು ಸಪ್ತಾಹ ಪರ್ಯಂತ ವ್ರತಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಅಪೇಕ್ಷಿತರು ತಾ.01-12-2022ನೇ ಬುಧವಾರ ಬೆಳಗ್ಗೆ 9.00ಗಂಟೆಗೆ ಶ್ರೀ ಸಂಸ್ಥಾನದಲ್ಲಿ ಹಾಜರಿರುವುದು.

  • ಮುದ್ರೆ ಸಹಿತ ದತ್ತಮಾಲೆ ಶ್ರೀ ಸಂಸ್ಥಾನದ ಸೇವಾ ವಿಭಾಗದಲ್ಲಿ ಲಭ್ಯವಿರುವುದು, ನಿಯಮಗಳು: ಎರಡು ಹೊತ್ತು ಸ್ನಾನ, ಏಕಭುಕ್ತರಾಗಿ(ಒಂದು ಹೊತ್ತು ಊಟ), ಸಾತ್ವಿಕರಾಗಿ, ತ್ರಿಕರಣಪೂರ್ವಕ ಶ್ರೀ ಗುರುದತ್ತಾತ್ರೇಯರ ಸ್ಮರಣೆಯೊಂದಿಗೆ ನಿತ್ಯ ಕಾರ್ಯಗಳಲ್ಲಿ ತೊಡಗುವುದು, ಗುರುಚರಿತ್ರೆ ಪಾರಾಯಣವೂ ಮಾಡಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles