ದಾವಣಗೆರೆ:ದಾವಣಗೆರೆಯ ರಂಗಕಲಾ ಆಕಾಡೆಮಿಯಿಂದ ಡಿಸೆಂಬರ್ 29 ಭಾನುವಾರದಂದು ನಗರದ ಪಿ.ಜೆ. ಬಡಾವಣೆಯ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ರಂಗ ಮಹಲ್‌ನ ಸಭಾಂಗಣದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಲೆಯ ವೃತ್ತಿಪರ ಮತ್ತು ಸೃಜನಶಿಲದ ಪಠ್ಯಕ್ರಮದ ಕಲೆಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈ ತರಬೇತಿಯ ಮುಖ್ಯಸ್ಥರಾದ ರಾಮಮೂರ್ತಿ ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ಹೊಸ ವರ್ಷದ ಗ್ರಿಟಿಂಗ್ಸ್ ಕಾರ್ಡ್, ಫೆನ್ಸಿಲ್ ಫೌಚ್ ಡಿಜೈನ್, ಪೇಪರ್‌ನಲ್ಲಿ ತ್ರಿಕೋಲ 32ಡಿ ನ್ಯೂಸ್ ಪೇಪರ್ ಡಿಸೈನ್ ಕಟಿಂಗ್ ಮುಂತಾದ ಕಲಾ ಚಟುವಟಿಕೆಗಳನ್ನು ಎಲೆಮರೆಯ ಕಲಾಸಕ್ತರಿಗೆ ಅವರಲ್ಲಿರುವ ಕಲಾಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಈ ಕಲಾಪ್ರಕಾರಗಳ ಕಾರ್ಯಾಗಾರದಲ್ಲಿ ಭಾಗವಹಿಸುವವರು ಈ ಕೆಳಗಿನ ಸನೀಹವಾಣಿಗಳಿಗೆ ಸಂಪರ್ಕಿಸಬೇಕಾಗಿ ಯುವ ಕಲಾವಿದೆ ಕುಮಾರಿ ನೇಹಾ ಚನ್ನಗಿರಿ ವಿನಂತಿಸಿದ್ದಾರೆ. 9980868443, 9844467207 ಈ ಸಂಖ್ಯೆಗೆ ಕಲಾಸಕ್ತರು ಸಂಪರ್ಕಿಸಿ ಎಂದು ರಂಗಕಲಾ ಆಕಾಡೆಮಿಯ ಗೌರವ ಸಲಹೆಗಾರರೂ ಚಿತ್ರಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.