Sunday, July 14, 2024
Homeಮೂಡುಬಿದಿರೆದ.ಕ. ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

ದ.ಕ. ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

ಮೂಡುಬಿದಿರೆ : ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಮೂಡುಬಿದಿರೆ ಸ್ವೀಪ್ ಸಮಿತಿ ವತಿಯಿಂದ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ನಲ್ಲಿ ಮತದಾನ ಜಾಗೃತಿ ಗೀತೆಯನ್ನು ಸ್ವಚ್ಚತಾ ವಾಹಿನಿಯಲ್ಲಿ ಪ್ರಚಾರ ಮಾಡಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್. ವೆಂಕಟಚಲಪತಿಯವರು ಹಸಿರು ನಿಶಾನೆಯನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಶ್ರೀ ತುಳಸಿ ಸಂಜೀವಿನಿ ಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ಮಹಿಳೆಯರಿಗೆ ಸರಕಾರವು ವಿವಿಧ ಯೋಜನೆಯನ್ನು ಪರಿಚಯಿಸಿ, ಅದರಿಂದ ಮಹಿಳೆಯರು ಸದೃಢರಾಗಬೇಕು ಎಂಬ ಆಶಯವನ್ನು ಹೊಂದಿರುತ್ತದೆ. ಗ್ರಾಮ ಮಟ್ಟದಲ್ಲಿರುವ ಸಂಜೀವಿನಿ ಒಕ್ಕೂಟ ರಚನೆಯ ಸಂದರ್ಭದಲ್ಲೂ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಯನ್ನು ಅವರ ನಾಯಕತ್ವ ಹಾಗೂ ಕೆಲಸದ ಕೌಶಲ್ಯವನ್ನು ನೋಡಿಕೊಂಡು ಆಯ್ಕೆ ಮಾಡಲಾಗುವುದು. ಅದರಂತೆ ಎಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಉತ್ತಮವಾದ ರೀತಿಯಲ್ಲಿ ನಡೆಸಿಕೊಂಡು ಹೋಗಲು ಉತ್ತಮ ನಾಯಕನ ಆಯ್ಕೆಯೂ ಅಷ್ಟೆ ಮುಖ್ಯವಾಗಿರುತ್ತದೆ ಎಂದರು. ಬಳಿಕ ಮತದಾನದ ಕುರಿತಾದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಂಜುಳ ಹುನಗುಂದ, ಎನ್ ಆರ್ ಎಲ್ ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಅಶೋಕ್, ಐಇಸಿ ಸಂಯೋಜಕಿ ಅನ್ವಯ, ಒಕ್ಕೂಟದ ಉಪಾಧ್ಯಕ್ಷರಾದ ನಳಿನಿ, ಎಂಬಿಕೆ ಪ್ರತಿಭಾ, ಎಲ್ ಸಿ ಆರ್ ಪಿ ಶುಭಮಣಿ,ಸುಧಾ, ಪಂಚಾಯತ್ ಸಿಬ್ಬಂದಿಗಳಾದ ಪ್ರತಿಭಾ, ಯಶೋಧರ್, ಚಂದ್ರಿಕಾ, ವೈಷ್ಣವಿ, ಸತೀಶ್ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular