ಮಂಗಳೂರು: ಮಂಗಳೂರು ಅಸೋಸಿಯೇಷನ್‌ನ “ಕಲಾ ಸಂಭ್ರಮ-2ʼʼ ಪ್ರದರ್ಶನ ಸೈಹತ್‌ನ ಡೆಲಿಮನ್ ರೆಸಾರ್ಟ್‌ನಲ್ಲಿ ಡಿ. 20ರಂದು ಮಧ್ಯಾಹ್ನ 1.30ರಿಂದ ರಾತ್ರಿ 10ಗಂಟೆಯ ವರೆಗೆ ನಡೆಯಲಿದೆ.
ಇದು ಸಾಂಸ್ಕೃತಿಕ ಹಬ್ಬದ ಆಗಿದ್ದು, ಭಾರತದ ವಿವಿಧ ಭಾಗಗಳ ಎಂಟು ತಂಡದ ನಡುವೆ ಸ್ಪರ್ಧೆ ನಡೆಯಲಿದ್ದು, ಪ್ರತಿಭಾವಂತ ತಂಡಗಳ ರೋಚಕ, ರೋಮಾಂಚಕ ಮತ್ತು ರಾಕಿಂಗ್ ಪ್ರದರ್ಶನ (ಶಾಸ್ತ್ರೀಯ ನೃತ್ಯ, ಸಿನಿಮಾ ನೃತ್ಯ, ಹಾಡುಗಾರಿಕೆ ಮತ್ತು ಅಲಂಕಾರಿಕ ಉಡುಗೆ). ನಡೆಯಲಿದೆ. ಊಟ ಮತ್ತು ತಿಂಡಿಗಳಿಗೆ ಸ್ಟಾಲ್ ಸೌಲಭ್ಯ ಲಭ್ಯವಿದ್ದು, ಕುಟುಂಬದೊಂದಿಗೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ ಎಂದು ಅಧ್ಯಕ್ಷ ಗೋಪಾಲ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.