ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದೇ ಪ್ರಕರಣದಲ್ಲಿ ಮೂವರನ್ನು ಖುಲಾಸೆ ಮಾಡಲಾಗಿದೆ. ಘಟನೆ ನಡೆದು ಸುಮಾರು 11 ವರ್ಷಗಳ ಬಳಿಕ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ದೋಷಿಗಳಾದ ಸಚಿನ್ ಅಂದುರೆ, ಶರದ್ ಕಳಸ್ಕರ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ. ಅಲ್ಲದೆ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ. ವೀರೇಂದ್ರ ಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಾಲೇಕರ್ ಖುಲಾಸೆಗೊಂಡಿದ್ದಾರೆ.
ವಿಚಾರವಾದಿಯಾಗಿದ್ದ, ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕ ದಾಭೋಲ್ಕರ್ 2013ರಲ್ಲಿ ಪುಣೆಯಲ್ಲಿ ಹತ್ಯೆಗೀಡಾಗಿದ್ದರು. ಪುಣೆಯಲ್ಲಿ ಬೆಳಗಿನ ವೇಳೆ ಇಬ್ಬರು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.