Friday, March 21, 2025
Homeತುಳುನಾಡುದೈಲಬೆಟ್ಟು: ಶಿವರಾತ್ರಿ ಮಹೋತ್ಸವ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ

ದೈಲಬೆಟ್ಟು: ಶಿವರಾತ್ರಿ ಮಹೋತ್ಸವ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ

ಕಲ್ಲಮುಂಡ್ಕೂರು: ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿಯಂದು ಸಾಂಸ್ಕೃತಿಕ ಕಲಾವೇದಿಕೆ ಕಲ್ಲಮುಂಡ್ಕೂರು ಇದರ ಪ್ರಾಯೊಜಕತ್ವದಲ್ಲಿ 5ನೇ ವರ್ಷದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ 48 ವರ್ಷಗಳಿಂದ ಚೆನ್ನಯ ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮೋಹನ ಪೂಜಾರಿ ಮುರಂತ ಬೆಟ್ಟು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀಯುತರಾದ ಪಶುಪತಿ ಶಾಸ್ತ್ರಿ, ಜಯಪ್ರಕಾಶ್ ಪಡಿವಾಳ್, ಜಯರಾಮ್ ಅಮೀನ್ ಅರ್ದೊಟ್ಟು ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಅರುಣಾಕುಮಾರ ಕೊಪ್ಳು ವಹಿಸಿದ್ದರು. ಸ್ವಾಗತವನ್ನು ಗಾಯತ್ರಿಮೋಹನ್ ಚಂದ್ರ ಕುಲಾಲ್, ಸನ್ಮಾನ ಪತ್ರವನ್ನು ಕವಿತಾ ರಮೇಶ್ ಧನ್ಯವಾದವನ್ನು ವಿಕಾಸ್ ಕುಲಾಲ್ ನಡೆಸಿಕೊಟ್ಟರು. ನಿರೂಪಣೆ ಕುಮಾರಿ ಸಪ್ನ ಕುಲಾಲ್ ಬನ್ನಡ್ಕ ನಿರ್ವಹಿಸಿಕೊಟ್ಟರು. ಕಾರ್ಯಕ್ರಮದ ಸಮಗ್ರ ನಿರ್ವಾಹಣೆಯನ್ನು ಮೋಹನ್ ಹೊಸ್ಮಾರ್ ನೇತೃತ್ವದ ಕುಲಾಲ ಕಲಾವೇದಿಕೆ ತಂಡ ಮೂಡಬಿದ್ರೆ ನಡೆಸಿಕೊಟ್ಟಿತ್ತು. ತದನಂತರ ಸ.ಹಿ.ಪ್ರಾ ಶಾಲೆ ಕಲ್ಲಮುಂಡ್ಕೂರು ಹಾಗು ಅಂಗನವಾಡಿ ಕೇಂದ್ರ ಕಳಸಬೈಲು ಇದರ ಪುಟಾಣಿಗಳ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ಶಿವಭಕ್ತ ಮಾರ್ಕಂಡೆಯೆ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶಿಸಲ್ಪಟ್ಟಿತು.

RELATED ARTICLES
- Advertisment -
Google search engine

Most Popular