ದಾವಣಗೆರೆ : ಕನ್ನಡ ರಾಜ್ಯೊತ್ಸವ ಕೇವಲ ನವಂಬರ್‌ಗೆ ಸೀಮಿತವಾಗದೇ ಹಿರಿಯ ಕವಿ ನಿಸಾರ್ ಅಹ್ಮದ್ ಬರೆದ ಕವಿತೆಯಂತೆ ನಿರಂತರವಾಗಿ ಕನ್ನಡ ನಾಡು- ನುಡಿಯ ಕಾಳಜಿಯೊಂದಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕನ್ನಡ ನಿತ್ಯೋತ್ಸವ ಆಚರಣೆ ಶ್ಲಾಘನೀಯ. ಮಕ್ಕಳು ಶೈಕ್ಷಣಿಕ ಕಾಳಜಿಯೊಂದಿಗೆ ಬದ್ದತೆಯಿಂದ ಕರ್ತವ್ಯ ಪ್ರಜ್ಞೆಯೊಂದಿಗೆ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶಕ್ಕೆ ಭದ್ರವಾದ ಬುನಾದಿ ಎಂದು ಸಮಾನ ಮನಸ್ಕರ ವೇದಿಕೆಯ ಸಂಸ್ಥಾಪಕರಾದ ಅಬ್ದುಲ್ ಸತ್ತಾರ್ ಸಾಹೇಬ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ದಾವಣಗೆರೆಯ ಎಸ್.ಎಸ್.ಎಂ. ನಗರದ ಸರ್ಕಾರಿ
ಉರ್ದು ಪ್ರೌಢಶಾಲೆಯ ಸಭಾಂಗಣದಲ್ಲಿ ನಿನ್ನೆ ನಡೆದ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ ಉತ್ತರ
ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇರ್ ಅಲಿ ಮಾತನಾಡಿ, ನಮ್ಮ ದಾವಣಗೆರೆ ಜಿಲ್ಲೆ ಎಸ್.ಎಸ್.ಎಲ್.ಸಿ.
ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಬರಬೇಕಾದರೆ ಮಕ್ಕಳು ಈಗಿನಿಂದಲೇ ಸಂಕಲ್ಪ
ಮಾಡಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯೊಪಾಧ್ಯಾಯರಾದ ಶ್ರೀಮತಿ ಉಮಾದೇವಿ ಕೆ. ಮಾತನಾಡಿ, ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ಹೆತ್ತ ತಂದೆ-ತಾಯಿಯರ ಕನಸು ನನಸು ಮಾಡುವುದರೊಂದಿಗೆ ಶಿಕ್ಷಣ ಸಂಸ್ಥೆಗೆ ಐತಿಹಾಸಿಕ ಪರಂಪರೆಯ ಕರ್ನಾಟಕದ ಹೃದಯ ಭಾಗದ ದಾವಣಗೆರೆಗೆ ಒಳ್ಳೆಯ ಹೆಸರು ತರಬೇಕು ಎಂದರು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಧೈರ್ಯ ತುಂಬಿ ಉಚಿತವಾಗಿ ಕಾರ್ಯಾಗಾರ ನಡೆಸಿ, ಮಾರ್ಗದರ್ಶನ ಮಾಡಿದರು. ಶಿಕ್ಷಣಾಧಿಕಾರಿಗಳ, ಶಿಕ್ಷಕ- ಶಿಕ್ಷಕಿಯರ ಅನುಮತಿ ಪಡೆದು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಸ್ಲೀಂ ಎಂ.ಆರ್. ಮತತು ಹಸೀನಾ ಬೇಗಂ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕನ್ನಡ ಶಿಕ್ಷಕರಾದ ಗಂಗಾನಾಯ್ಕ ಹೆಚ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಹಿಂದಿ ಶಿಕ್ಷಕಿ ಉಮಾದೇವಿ ಕೆ. ವಂದಿಸಿದರು.
ಕಲಾಕುಂಚದಿಂದ ಉರ್ದು ಶಾಲೆಯಲ್ಲಿ ಕನ್ನಡ ನಿತ್ಯೋತ್ಸವ ಆಚರಣೆ ಶ್ಲಾಘನೀಯ-ಅಬ್ದುಲ್ ಸತ್ತಾರ್ ಸಾಹೇಬ್
RELATED ARTICLES