ಕಿನ್ನಿಗೋಳಿ : ಮುಂಡಾಲ ಕಲ್ಯಾಣ ಸಂಸ್ಥೆ ಮೂಲ್ಕಿ ಇದರ ವಿಶೇಷ ಸಂಯೋಜನೆಯಲ್ಲಿ ಮುಂಡಾಲ ಸಮಾಜ ಬಾಂಧವರಿಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಶ್ರೀ ಬಬ್ಬುಸ್ವಾಮಿ ಭಕ್ತಿ ಗೀತೆ ಹಾಗೂ ಕನ್ನಡ, ತುಳು, ಚಿತ್ರ ಗೀತೆಗಳ ಕರೋಕೆ ಗಾಯನ ಸ್ಪರ್ಧೆಯನ್ನು ಡಿ. 11ರಂದು ಬೆಳಿಗ್ಗೆ 9ರಿಂದ ಮೂಲ್ಕಿ ಕಾರ್ನಾಡಿನ ಗೇರುಕಟ್ಟೆಯ ಅಮೃತಾನಂದಮತಿ ನಗರದ ಅಂಬೇಡ್ಕರ್ ಭವನದಲ್ಲಿ ಸಂಯೋಜಿಸಿದೆ.
ಸ್ಪರ್ಧೆಯು ಸಂಪೂರ್ಣವಾಗಿ ಉಚಿತವಾಗಿದ್ದು, 8 ರಿಂದ 14 ವರ್ಷ ಹಾಗೂ 14 ರಿಂದ 22 ವರ್ಷದ ಜೂನಿಯರ್ ವಿಭಾಗ, 22ರಿಂದ 35 ವರ್ಷ ಹಾಗೂ 35ರಿಂದ ಮೇಲ್ಪಟ್ಟವರಿಗೆ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಥಮ ಹಾಗೂ ದ್ವಿತೀಯ ನಗದು ಸಹಿತ ಪ್ರಶಸ್ತಿ ಫಲಕ ನೀಡಿ ಗೌರವಿಸಲಿದ್ದಾರೆ. ಉತ್ತಮ ಗಾಯನ, ಉತ್ತಮ ಸ್ವರ ವಿಶೇಷ ಪ್ರಶಸ್ತಿಯನ್ನು ನೀಡಲಾಗುವುದು. ಮೊದಲು ನೋಂದಾಯಿಸಿದ 48 ಸ್ಪರ್ಧಾಳುಗಳಿಗೆ ಪ್ರಥಮ ಅವಕಾಶ ಇದೆ. ನೋಂದಾಯಿಸಲು ಕೊನೆಯ ದಿನಾಂಕ 03-12-2022..
ಸ್ಪರ್ಧಾ ನಿಯಮ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9449640070, 7483925378, 8050481070, 6362787359, 7259340967

Leave a Reply

Your email address will not be published. Required fields are marked *