Wednesday, April 23, 2025
Homeಮಂಗಳೂರುದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ವಾಟ್ಸಪ್ ಅಭಿಯಾನ: 'ರಜೆ' ಆಸಕ್ತಿ ಡೆಂಗ್ಯೂ ನಿಯಂತ್ರಣಕ್ಕೂ ಇರಲಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ವಾಟ್ಸಪ್ ಅಭಿಯಾನ: ‘ರಜೆ’ ಆಸಕ್ತಿ ಡೆಂಗ್ಯೂ ನಿಯಂತ್ರಣಕ್ಕೂ ಇರಲಿ

ಮಂಗಳೂರು: ಮಳೆ ಬರುವ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿಂದ ಯಾವ ರೀತಿ ರಜೆ ಇದೆಯೋ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತೀರೋ ಅದೇ ಕಾಳಜಿ ಡೆಂಗ್ಯೂ ನಿಯಂತ್ರಣಕ್ಕೂ ಇರಲಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ‌ ಮುಹಿಲನ್ ಕರೆ ನೀಡಿದ್ದಾರೆ.

ಈ ಕುರಿತಂತೆ ಜಾಗೃತಿ ವೀಡಿಯೋ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ, ಕಟ್ಟಿ ನಿಂತ ಶುದ್ಧ ನೀರಿನಲ್ಲಿ ಡೆಂಗ್ಯೂಕಾರಕ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ನೀರು ಕಟ್ಟಿ ನಿಲ್ಲದಂತೆ ಕ್ರಮವಹಿಸಬೇಕಿದೆ ಎಂದು ಕರೆ ನೀಡಿದ್ದಾರೆ.

ಅಲ್ಲದೇ ನಿಮ್ಮ ಸಮೀಪ ನೀರು ನಿಂತಿರುವ ಪ್ರದೇಶಗಳಿದ್ದರೆ ಅಂತಹ ಪ್ರದೇಶದ ಫೋಟೊ ಅಥವಾ ವೀಡಿಯೋ ವನ್ನು 9449007722 ಕಳುಹಿಸಿದರೆ ಈ‌ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಜೊತೆಗೆ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯ ಲಾರ್ವಾ ಕಂಡುಬಂದಲ್ಲಿ ಅದರ ಫೋಟೋ ತೆಗೆದು ಈ ಕೆಳಗಿನ ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಬೇಕು. ಫೋಟೋದೊಂದಿಗೆ ಸ್ಥಳದ ಸರಿಯಾದ ವಿಳಾಸವನ್ನು ನಮೂದಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ನಗರ ಪ್ರದೇಶಗಳು:
1) ಮಂಗಳೂರು ಮಹಾನಗರಪಾಲಿಕೆ ಕಂಟ್ರೋಲ್ ರೂಂ: 9449007722,
ಮೇಲ್ವಿಚಾರಕರು: ನಿತಿನ್ – 9743219627, ಚಂದ್ರಹಾಸ- 9482250909, ಚೇತನ್- 9742567033, ಪ್ರವೀಣ್- 8618794892
2) ಉಳ್ಳಾಲ ನಗರಸಭೆ : ಪೌರಾಯುಕ್ತರು – 9449073871
3) ಸೋಮೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು- 9449452255
4) ಕೋಟೆಕಾರ್ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902209485
5) ಮೂಡಬಿದ್ರೆ ಪುರಸಭೆ: ಮುಖ್ಯಾಧಿಕಾರಿಗಳು- 8105926291
6) ಮೂಲ್ಕಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 8105926291
7) ಕಿನ್ನಿಗೋಳಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9886080940
8) ಬಜಪೆ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902774917
9) ಬಂಟ್ವಾಳ ಪುರಸಭೆ :ಮುಖ್ಯಾಧಿಕಾರಿಗಳು- 9972989637
10) ವಿಟ್ಲ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ -9606321133
11) ಪುತ್ತೂರು ನಗರಸಭೆ : ಪೌರಾಯುಕ್ತರು – 9886403029
12) ಬೆಳ್ತಂಗಡಿ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ – 9845518266
13) ಸುಳ್ಯ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9448253341
14) ಕಡಬ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9980882189

ಗ್ರಾಮಾಂತರ ಪ್ರದೇಶಗಳು:
1) ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9480862110/9483912230
2) ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9620636400
3) ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862110/9483912230
4) ಮೂಡಬಿದ್ರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9448795901
5) ಮೂಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9901114650
6) ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862115
7) ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353
8) ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 8217830169
9) ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353

RELATED ARTICLES
- Advertisment -
Google search engine

Most Popular