ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್ ರೌಡಿಶೀಟರ್‌ಗಳ ಜೊತೆಗೆ ಬಿಂದಾಸ್ ಆಗಿರುವ ಫೋಟೊ ಮತ್ತು ಸಹ ಕೈದಿಯ ಸ್ನೇಹಿತನ ಜೊತೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಿರುವ ಸ್ಕ್ರೀನ್ ಶಾಟ್ ಫೋಟೊಗಳು ಭಾರೀ ವೈರಲ್ ಆಗಿವೆ. ಇದು ನಟ ದರ್ಶನ್‌ಗೆ ಹಾಗೂ ಜೈಲು ಅಧಿಕಾರಿಗಳಿಗೆ ಹೊಸ ಸಂಕಷ್ಟವನ್ನು ತಂದಿಟ್ಟಿದೆ.
ನಟ ದರ್ಶನ್ ಹೊರಗೆ ಯಾವ ರೀತಿ ಬಿಂದಾಸ್ ಜೀವನ ನಡೆಸುತ್ತಿದ್ದಾರೋ, ಅದೇ ರೀತಿ ಜೈಲಿನಲ್ಲಿಯೂ ದರ್ಶನ್ ಇರುವಂತೆ ಕಾಣಿಸುತ್ತಿದೆ. ದರ್ಶನ್‌ಗೆ ಬೇಕಿರುವ ವ್ಯವಸ್ಥೆಗಳನ್ನೆಲ್ಲಾ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಜೈಲಿನಿಂದ ಸೋರಿಕೆಯಾಗಿರುವ ಫೋಟೊಗಳು ಈ ಚರ್ಚೆಗಳನ್ನು ಹುಟ್ಟು ಹಾಕಿದೆ. ದರ್ಶನ್‌ಗೆ ಇಂತಹ ಸೌಲಭ್ಯ ಒದಗಿಸಿಕೊಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ.
ದರ್ಶನ್ ಒಂದು ಕೈಯಲ್ಲಿ ಟೀ ಕಪ್, ಇನ್ನೊಂದು ಕೈಯಲ್ಲಿ ಸಿಗರೇಟು ಹಿಡಿದು, ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ಆರೋಪಿ ಆಪ್ತ ನಾಗರಾಜ್ ಕುರ್ಚಿಯಲ್ಲಿ ಆರಾಮವಾಗಿ ಕುಳಿತುಕೊಂಡು ತಪ್ಪಿನ ಯಾವುದೇ ಪಶ್ಚಾತ್ತಾಪವಿಲ್ಲದಂತೆ ಇರುವ ಫೋಟೊ, ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ. ಇದೀಗ ಈ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳಿಗೆ ನಡುಕ ಆರಂಭವಾಗಿದೆ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶವಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜೈಲಲ್ಲೂ ಬಿಂದಾಸ್ ಪಾರ್ಟಿ | ಫೋಟೊ, ವಿಡಿಯೋ ವೈರಲ್
RELATED ARTICLES