ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿದ್ದ ಸುದ್ದಿ ಈಗ ಭಾರೀ ಸಂಚಲನ ಮೂಡಿಸಿದೆ. ಆದರೆ ಜೈಲಿನಿಂದಲೇ ದರ್ಶನ್ ವಿಡಿಯೋ ಕಾಲ್‌ಗೆ ಹೇಗೆ ಸಿಕ್ಕಿದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ದರ್ಶನ್ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಲೀಕ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ದರ್ಶನ್ ಜೈಲಿನ ಬ್ಯಾರಕ್‌ನಲ್ಲಿರುವಾಗ ವಿಡಿಯೊ ಕಾಲ್ ಮಾಡಿದ್ದು ಹೇಗೆ? ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡ ವ್ಯಕ್ತಿ ಯಾರು ಅನ್ನುವ ರಹಸ್ಯ ಈಗ ಬಯಲಾಗಿದೆ. ದರ್ಶನ್ ವಿಡಿಯೋ ಕಾಲ್‌ನಲ್ಲಿ ಇರುವವನು ಒಬ್ಬ ರೌಡಿಶೀಟರ್ ಮಗ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ಧನ್ ಎಂಬವರ ಮಗ ಈ ವಿಡಿಯೊದಲ್ಲಿರುವುದು ಎಂಬುದು ಬಯಲಾಗಿದೆ.
ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್ ತೋರಿಸಿರುವುದು ಕೂಡ ರೌಡಿ ಶೀಟರ್. ಆತನ ಹೆಸರು ಧರ್ಮ. ಧರ್ಮ ಎಂಬಾತ ಮೇ 7ರಂದು ಬಾಣಸವಾಡಿಯ ಕಾರ್ತಿಕೇಯನ್ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾನೆ.
ಜಾನಿ ಮಗ ಸದ್ಯ ಕೂಡ ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊಡೆದು ಜೈಲಿಗೆ ಹೋಗಿ ಸದ್ಯ ಜಾಮೀನಿನಲ್ಲಿ ಹೊರಗಿದ್ದಾನೆ.
ಜೈಲಿನ ಹೊರಬಂದಿರುವ ಸತ್ಯ ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಆಗ ಮಾರ್ಕೆಟ್ ಧರ್ಮ, ದರ್ಶನ್ ನಮ್ಮ ಸೆಲ್ ಪಕ್ಕದಲ್ಲೇ ಇರೋದು ಎಂದದ್ದಾನೆ. ಕೂಡಲೇ ಇರು ತೋರಿಸ್ತೀನಿ ಎಂದು ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದಾನೆ. ಇದೇ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಸತ್ಯ ಏರಿಯಾದಲ್ಲಿ ಸಖತ್ ಬಿಲ್ಡಪ್ ಕೊಟ್ಟಿದ್ದಾನೆ. ಕಲಾಸಿಪಾಳ್ಯದ ಕೆಲವು ಹುಡುಗರಿಗೂ ವಿಡಿಯೋ ಕಳುಹಿಸಿದ್ದ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಸತ್ಯ ವಿಡಿಯೋ ಕಾಲ್‌ನಿಂದಾಗಿ ಈಗ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.