Sunday, July 14, 2024
Homeಅಪರಾಧಕೊಲೆ ಪ್ರಕರಣದ ಬಳಿಕ ದರ್ಶನ್‌ಗೆ ಈಗ ಐಟಿ ಸಂಕಷ್ಟ! | ನಟನ ಬಳಿ 70 ಲಕ್ಷ...

ಕೊಲೆ ಪ್ರಕರಣದ ಬಳಿಕ ದರ್ಶನ್‌ಗೆ ಈಗ ಐಟಿ ಸಂಕಷ್ಟ! | ನಟನ ಬಳಿ 70 ಲಕ್ಷ ರೂ. ಎಲ್ಲಿಂದ ಬಂತು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣದೊಂದಿಗೆ ಈಗ ಐಟಿ ಸಂಕಷ್ಟ ಎದುರಾಗಲಿದೆ ಎಂದು ವರದಿಗಳು ತಿಳಿಸಿವೆ.
ರೇಣುಕಾಸ್ವಾಮಿ ಶವ ವಿಲೇವಾರಿ ಮಾಡಲು 30 ಲಕ್ಷ ರೂ. ದರ್ಶನ್‌ ನೀಡಿದ್ದು, ಆರೋಪಿಯೊಬ್ಬನ ಬಳಿ ಅದು ಪತ್ತೆಯಾಗಿದೆ. ಇನ್ನೊಂದೆಡೆ ಪೊಲೀಸರು ಜೂ. 19ರಂದು ದರ್ಶನ್‌ ಮನೆಯಲ್ಲಿ 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪದ ಜೊತೆಗೆ ಈಗ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಬಳಿ 2 ಲಕ್ಷ ರೂ. ಇರಿಸಿಕೊಳ್ಳಬಹುದಾಗಿದೆ. ಆದರೆ ತನಿಖೆಯಲ್ಲಿ ಒಟ್ಟು 70 ಲಕ್ಷ ರೂ. ದರ್ಶನ್‌ಗೆ ಸಂಬಂಧಿಸಿದ ಹಣ ಪತ್ತೆಯಾಗಿದೆ. ಈ ಹಣಕ್ಕೆ ತೆರಿಗೆ ಪಾವತಿ ಮಾಡಲಾಗಿದೆಯಾ? ಇಷ್ಟೊಂದು ನಗದು ಹಣದ ಮೂಲ ಯಾವುದು? ಎಂದು ತನಿಖೆ ನಡೆಸಲು ಐಟಿ ಅಧಿಕಾರಿಗಳಿಗೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular