ಬೆಳ್ತಂಗಡಿ : ಕಾಸರಗೋಡು ಜಿಲ್ಲೆಯ ಬಾಯಾರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದಿದ್ದ ಯಾತ್ರಾರ್ಥಿಗಳು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಾಯಾರಿನ ಪಾದಯಾತ್ರಿಗಳ ತಂಡ ಕಳೆದ 15 ವರ್ಷಗಳಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ ನೀಡುತ್ತಿದ್ದು ಈ ಭಾರಿಯೂ ಬಂದವರು ದೇವರ ದರ್ಶನ ಪಡೆದರು.
2014 ರಲ್ಲಿ ನಾಳ ದೇವಸ್ಥಾನದಲ್ಲಿ ನಡೆದ ಬ್ರಹ್ಮ ಕಲಶೋತ್ಸಹ ಸಂದರ್ಭದಲ್ಲಿ ಈ ತಂಡದ ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಇದೇ ತಂಡ ಕಳೆದ 3 ವರ್ಷಗಳ ಹಿಂದೆ ನಾಳ ಕ್ಷೇತ್ರಕ್ಕೆ ಸುಮಾರು 10 ಸಾವಿರ ಮೌಲ್ಯದ ಕಂಚಿನ ದೀಪವನ್ನು ಕೊಡುಗೆ ನೀಡಿದ್ದಾರೆ.

ಕಾಸರಗೋಡು ಸುರೇಶ್ ಭಟ್ ಬಾಯರು ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ದೇವರ ದರ್ಶನ ಪಡೆಯಲು ಬರುವ ಸಮಯದಲ್ಲಿ ನಾಳ ದೇವಸ್ಥಾನದಲ್ಲಿ 41 ಜನ ಭಕ್ತಾದಿಗಳು ರಾತ್ರಿ ವೇಳೆ ನಾಳ ದೇವಸ್ಥಾನದಲ್ಲಿ ತಂಗಿದ್ದರು.
ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಭಕ್ತಾದಿಗಳಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಿ, ಮರುದಿನ ದೇವಸ್ಥಾನದ ವತಿಯಿಂದ ಬೀಳ್ಕೊಟ್ಟು ಶುಭ ಹಾರೈಸಿದರು.

ಕಾಲ್ನಡಿಗೆ ಭಕ್ತಾದಿಗಳು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.