ಮಂಗಳೂರು: ಬೋಧಿ ಪ್ರೊಡಕ್ಷನ್ಸ್‌ರವರ, ಕೃಷ್ಣ ಜೆ. ಪಾಲೇಮಾರ್ ಅರ್ಪಿಸುವ 77 ಸ್ಟುಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಪಕದಲ್ಲಿ, ಅನೀಶ್ ಪೂಜಾರಿ ವೇಣೂರುರವರ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ವೀಕ್ಷಿಸಿದ ತುಳುನಾಡಿನ ದಿಗ್ಗಜ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಮೋಷನ್ ಪೋಸ್ಟರ್ ನೋಡಿ ಫಿದಾ ಆಗಿರುವ ಹಿರಿಯ ಕಲಾವಿದರು, ಈ ಸಿನೆಮಾ ಹೊಸ ಮೈಲಿಗಲ್ಲನ್ನು ನಿರ್ಮಿಸಲಿದೆ ಎಂದು ಹಾಡಿಹೊಗಳಿದ್ದಾರೆ.
ಸಿನೆಮಾ ನೋಡಲು ಕಾತರರಾಗಿದ್ದೇವೆ ಎಂಬ ಪ್ರೇಕ್ಷಕರ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ತುಳು ಸಿನೆಮಾ ದೇಶ – ವಿದೇಶಗಳಲ್ಲಿ ಮಿಂಚಲಿ ಎಂಬುದು ಕಲಾಭಿಮಾನಿಗಳ ಹಾರೈಕೆಯಾಗಿದೆ.
ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣವಿರಲಿದ್ದು, ಗಣೇಶ್ ನೀರ್ಚಾಲ್ ಸಂಕಲನ ಮಾಡಲಿದ್ದಾರೆ. ಸಮರ್ಥನ್ ಎಸ್. ರಾವ್ ಸಂಗೀತವಿರಲಿದೆ.