ದಾವಣೆಗೆರೆ: ಇನ್ನು ವಯಸ್ಸಿಗೆ ಬಾರದ ಮಕ್ಕಳಿಗೆ ಗಾಡಿ ಚಲಾಯಿಸಲು ಅವಕಾಶ ಕೊಡುವ ಪೊಷಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ದಾವಣಗೆರೆಯಲ್ಲಿ, ಮಗಳಿಗೆ ಆಕ್ಟಿವ್ ಹೋಂಡಾ ಚಾಲನೆಗೆ ಅವಕಾಶ ಮಾಡಿಕೊಟ್ಟ ತಾಯಿಗೆ ಸಂಚಾರ ಪೊಲೀಸರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಆಕ್ಟಿವ್ ಹೊಂಡಾ ಚಲಾಯಿಸುತ್ತಿದ್ದಳು. ಅದನ್ನು ತಡೆದ ಟ್ರಾಫಿಕ್ ಪೊಲೀಸರು ದಾಖಲೆ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ, ಅದನ್ನು ಚಲಾಯಿಸುತ್ತಿರುವುದು ಅಪ್ರಾಪ್ತ ಬಾಲಕಿ ಎಂಬುದು ದೃಢವಾಗಿ ಬಿಟ್ಟಿದೆ. ನಂತರ ಪೊಲೀಸರು ಆಕೆಯ ತಾಯಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.