Saturday, February 15, 2025
Homeದಾವಣಗೆರೆಮೂಲೆಗುಂಪಾದ ದಾವಣಗೆರೆ ತಾಲ್ಲೂಕು ಕಛೇರಿ

ಮೂಲೆಗುಂಪಾದ ದಾವಣಗೆರೆ ತಾಲ್ಲೂಕು ಕಛೇರಿ


ದಾವಣಗೆರೆ: ದಾವಣಗೆರೆಯ ವಿಜಯಲಕ್ಷ್ಮಿ ರಸ್ತೆಯ ಹತ್ತಿರ ಗಡಿಯಾರ ಗೋಪುರದ ಎದುರು ಇರುವ ದಾವಣಗೆರೆ ತಾಲ್ಲೂಕು ಕಛೇರಿ ಕಳೆದ 15 ವರ್ಷಗಳಿಂದ ಸ್ಥಗಿತವಾಗಿದ್ದು ಕಳೆದ ಐದು ವರ್ಷಗಳ ಹಿಂದೆ ಹೊಸ ಕಟ್ಟಡ ಕಟ್ಟಿದರೂ ಇದುವರೆಗೆ ಈ ಕಛೇರಿ ಪ್ರಾರಂಭವಾಗದೇ ಇರುವುದು ವಿಷಾದದ ಸಂಗತಿ.
ಪ್ರಸ್ತುತ ದಿನಮಾನಗಳಲ್ಲಿ ಈ ಕಛೇರಿ ಆವರಣ ಹಂದಿ, ನಾಯಿಗಳ ವಾಸ ಸ್ಥಳವಾಗಿದೆ. ಸಾರ್ವಜನಿಕ ಬಯಲು ಶೌಚಾಲಯ, ಮೂತ್ರ ವಿಸರ್ಜನೆಯ ತಾಣವಾಗಿದೆ. ದಾವಣಗೆರೆ ಸ್ಮಾರ್ಟ್ ಸಿಟಿ ಎಂದು ಹೆಸರಿಟ್ಟು ವ್ಯರ್ಥ. ಒಂದೂವರೆ ದಶಕಗಳಿಂದ ಈ ತಾಲ್ಲೂಕು ಕಛೇರಿ ಮುಚ್ಚಿದ್ದು 5 ವರ್ಷಗಳ ಹಿಂದೆ ಹೊಸ ಕಟ್ಟಡ ಕಟ್ಟಿದರೂ ಪ್ರತೀ ವರ್ಷ ಮಳೆಗಾಲದಲ್ಲಿ ಕಛೇರಿಯ ಒಳಗೆ ನೀರು ಹರಿಯುತ್ತಿದೆ, ಸೋರುತ್ತಿರುತ್ತದೆ.
ಕರ್ನಾಟಕದ ಹೃದಯ ಭಾಗವಾದ ದಾವಣಗೆರೆ ಐತಿಹಾಸಿಕ ಪರಂಪರೆಯ ದೇವನಗರಿ, ದಾನಿಗಳ ಊರು, ಜ್ಞಾನ ದೇಗುಲ ಎಂಬ ಹೆಸರಿನ ದಾವಣಗೆರೆಯ ಘನತೆ, ಗೌರವ ಉಳಿಸಲು, ದಯವಿಟ್ಟು ಈ ದಾವಣಗೆರೆ ತಾಲ್ಲೂಕು ಕಛೇರಿ ಆದಷ್ಟು ಬೇಗ ಸುಸಜ್ಜಿತವಾಗಿ ವ್ಯವಸ್ಥಿತವಾಗಿ ಸ್ವಚ್ಛತೆಯೊಂದಿಗೆ ಪ್ರಾರಂಭವಾಗಬೇಕೆAದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ, ಶಾಸಕರಲ್ಲಿ, ಸಂಸದರಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಲ್ಲಿ, ಜಿಲ್ಲಾಧಿಕಾರಿಗಳಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಲ್ಲಿ ದೂಡಾ ಅಧ್ಯಕ್ಷರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ, ದಾವಣಗೆರೆ ತಾಲ್ಲೂಕು ತಹಶೀಲ್ದಾರರಲ್ಲಿ, ಸಾಮಾಜಿಕ ಕಾಳಜಿಯೊಂದಿಗೆ ದಾವಣಗೆರೆಯ ಪತ್ರಕರ್ತ ಸಾಲಿಗ್ರಾಮ ಗಣೇಶ್‌ಶೆಣೈ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular