ದಾವಣಗೆರೆ: ಬಸವಣ್ಣ-ಸಾಂಸ್ಕೃತಿಕ ನಾಯಕ” ವಿಷಯ ಕುರಿತು ಆನ್ಲೈನ್ ನಲ್ಲಿ ಶರಣ ಚಿಂತನಗೋಷ್ಠಿ

0
78

ದಾವಣಗೆರೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ) ಮೈಸೂರು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 28.05.2024 ರ ಮಂಗಳವಾರ ಸಂಜೆ 7 ಗಂಟೆಯಿಂದ 9.00 ಗಂಟೆವರೆಗೆ ಆನ್ಲೈನ್ ಅರಿವಿನ ಮನೆ ಕಾರ್ಯಕ್ರಮದಲ್ಲಿ ಶರಣ ಚಿಂತನಗೋಷ್ಠಿ ಸಂಚಿಕೆ 8 ನ್ನು ಹಮ್ಮಿಕೊಳ್ಳಲಾಗಿದೆ. ಶರಣ ಚಿಂತನ ಗೋಷ್ಠಿಯಲ್ಲಿ ಶರಣ ಎನ್ .ಪಿ. ಚಂದ್ರಶೇಖರ್ ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ದೆಹಲಿ ಘಟಕ ಇವರು “ಬಸವಣ್ಣ-ಸಾಂಸ್ಕೃತಿಕ ನಾಯಕ”ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ. ಎಲ್ಲಾ ಶರಣ ಬಂಧುಗಳು ಈಗಾಗಲೆ ವ್ಯಾಟ್ಸಪ್ ಗೆ ಕಳುಹಿಸಲಾದ ಲಿಂಕ್ ಅನ್ನು ಬಳಸಿಕೊಂಡು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಶರಣ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ದಾವಣಗೆರೆ ಇವರು ಕೋರಿರುತ್ತಾರೆ.

LEAVE A REPLY

Please enter your comment!
Please enter your name here