ಬಂಟ್ವಾಳ: ಇಲ್ಲಿನ ತುಂಬೆ ವಳವೂರಿನ ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.
ಮದುವೆ ಸಭಾಂಗಣದ ಆವರಣದ ಒಳಗೆ ಸಂತೋಷ್ ಶವ ರಕ್ತಸಿಕ್ತವಾಗಿ ಬಿದ್ದುಕೊಂಡಿತ್ತು. ಸಭಾಂಗಣದ ಹೊರಗೆ ಈತನ ಬೈಕ್ ಪತ್ತೆಯಾಗಿದೆ.
ಸಾವಿಗೆ ಸ್ಷಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಪೊಲೀಸ್ ಮೂಲಗಳ ಪ್ರಕಾರ, ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತುಕೊಂಡಿರಬೇಕು. ಆ ಸಂದರ್ಭ ನಿಯಂತ್ರಣ ಕಳೆದು ಕೆಳಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.
ಶವದ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ಸ್ಪಷ್ಟವಾಗಿ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್ ಐ ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.